ಶಿಶು ಮರಣ ತಡೆಗಟ್ಟಿ: ಜೈನ್

7

ಶಿಶು ಮರಣ ತಡೆಗಟ್ಟಿ: ಜೈನ್

Published:
Updated:

ಬಾಗಲಕೋಟೆ: ‘ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳು ಶಿಶು ಹಾಗೂ ತಾಯಿ ಮರಣ ಪ್ರಮಾಣವನ್ನು ತಡೆಗಟ್ಟಲು ಜವಾಬ್ದಾರಿಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಬೇಕು’ ಜಿಲ್ಲಾಧಿಕಾರಿ ಮನೋಜ್ ಜೈನ್ ಸೂಚಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.‘ಗರ್ಭಿಣಿ, ತಾಯಿ ಹಾಗೂ ಶಿಶುವಿನ ಆರೋಗ್ಯಕ್ಕಾಗಿ ಸರ್ಕಾರವು ಹಲವಾರು ಉತ್ತಮ ಯೋಜನೆ­ಗಳನ್ನು ಹಮ್ಮಿಕೊಂಡಿದ್ದರೂ  ಅಲ್ಲಲ್ಲಿ ಶಿಶು ಹಾಗೂ ತಾಯಿಯರ ಮರಣದ ಘಟನೆಗಳು ಕಂಡು ಬರುತ್ತಿವೆ. ಇದನ್ನು ತಡೆಯಲು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿ­ಗಳು, ಆರೋಗ್ಯ ಸಹಾಯಕಿಯರು, ಆಶಾ ಮತ್ತು- ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನಜಾಗೃತಿ ತೀವ್ರಗೊಳಿಸಬೇಕು’ ಎಂದು ತಿಳಿಸಿದರು.‘ಆರೋಗ್ಯ ಇಲಾಖೆಯ ಕಾರ್ಯ ಯೋಜನೆಗಳನ್ನು ಅನುಷ್ಠಾನ­ಗೊಳಿಸು­ತ­್ತಿರುವ ಅಧಿಕಾರಿಗಳು ಹಾಗೂ ಆಡಳಿತ ನಡೆಸುವವರು ಮೂಲ ವೈದ್ಯಕೀಯ ಸೇವೆಯನ್ನು ಮರೆಯ­ಬಾರದು, ವೈದ್ಯಾಧಿಕಾರಿಗಳ ಕೊರತೆಯ ನೆಪ ಹೇಳದೇ ತಾವು ಸಹ ಹತ್ತಿರದ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ 9 ರಿಂದ 12ರ ವರೆಗೆ ಕನಿಷ್ಠ 3 ತಾಸು ವೈದ್ಯಕೀಯ ಸೇವೆ ಮಾಡಬೇಕು, ಈ ಕುರಿತು ನಾಳೆಯಿಂದಲೇ ಕಾರ್ಯ­ಪ್ರವೃತ್ತ­ರಾಗಬೇಕು, ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಸುತ್ತೋಲೆಯೊಂದನ್ನು ಹೊರಡಿಸುತ್ತೇವೆ’ ಎಂದು ಹೇಳಿದರು.‘ಆರೋಗ್ಯ ಇಲಾಖೆಗೆ ಸಂಬಂಧಿಸಿದ ಜಿಲ್ಲೆಯ ಹಾಗೂ ತಾಲ್ಲೂಕು ಮಟ್ಟದ ಸಭೆಗಳನ್ನು ಮಧ್ಯಾಹ್ನದ ವೇಳೆ ಹಮ್ಮಿಕೊಳ್ಳಬೇಕು’ ಎಂದು ಸೂಚಿಸಿದರು.‘ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆಗಳ ಬಗ್ಗೆ 3 ದಿನಗಳಲ್ಲಿ ವಿವರ ಸಲ್ಲಿಸಬೇಕು’ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ, ‘ಜಿಲ್ಲೆಯ ಎಲ್ಲ ಶಾಲೆ ವಿದ್ಯಾರ್ಥಿಗಳ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಶೀಘ್ರವೇ ಪೂರ್ಣಗೊಳಿಸಿ’ ಎಂದು ಸೂಚಿಸಿದರು. ಆರೋಗ್ಯಾಧಿಕಾರಿ ಡಾ.ಅರಹುಣಸಿ, ಶಸ್ತ್ರಚಿಕಿತ್ಸಕ ಡಾ.ಎ.ಎನ್. ದೇಸಾಯಿ, ಜಿಲ್ಲಾ ನೋಡಲ್ ಅಧಿಕಾರಿ ಉಪ­ನಿರ್ದೇಶಕ ಶ್ರೀನಿವಾಸಗೌಡ, ಜಿಲ್ಲಾ ಕಾರ್ಯಕ್ರಮಗಳ ವ್ಯವಸ್ಥಾಪಕ ಡಾ.ರಾಜಕುಮಾರ ಸೇರಿದಂತೆ ವಿವಿಧ ತಾಲ್ಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry