ಶಿಶು ಸಾವು ಕೇವಲ ವದಂತಿ: ಮಮತಾ

7

ಶಿಶು ಸಾವು ಕೇವಲ ವದಂತಿ: ಮಮತಾ

Published:
Updated:

ಸಜ್ನೆಖಲಿ, ಪಶ್ಚಿಮ ಬಂಗಾಳ  (ಪಿಟಿಐ): ರಾಜ್ಯದಲ್ಲಿ ಶಿಶುಗಳ ಮರಣ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದು ಕೇವಲ ವದಂತಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.`ಜನರನ್ನು ತಪ್ಪುದಾರಿಗೆಳೆಯಲು ಈ ಗಾಳಿ ಸುದ್ದಿ ಹಬ್ಬಲಾಗುತ್ತಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಕ್ಕಳು ಸಾಯುತ್ತಿವೆ ಎನ್ನುವುದು ಸತ್ಯಕ್ಕೆ ದೂರ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಈಚೆಗೆ ಉಸಿರುಗಟ್ಟಿ 94 ಜನ ಮೃತಪಟ್ಟ ಎಎಂಆರ್‌ಐ ಆಸ್ಪತ್ರೆಯವರು ಮಾಧ್ಯಮಗಳಲ್ಲಿ ಇಂಥ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry