ಶಿಸ್ತಿನಿಂದ ಯಶಸ್ಸು ಸಾಧ್ಯ: ಝುಬೈರ್

7

ಶಿಸ್ತಿನಿಂದ ಯಶಸ್ಸು ಸಾಧ್ಯ: ಝುಬೈರ್

Published:
Updated:

ರಾಣೆಬೆನ್ನೂರು: ಶಿಬಿರದಲ್ಲಿನ ಶಿಸ್ತನ್ನು ಇಡೀ ಜೀವನದುದ್ದಕ್ಕೂ ಪಾಲಿಸಿದರೆ ಯಶಸ್ಸು ಸಾಧಿಸಬಹುದು, ವಿಶೇಷ ಶಿಬಿರದಲ್ಲಿ ಪಾಲ್ಗೊಂಡ ಯುವಕರ ವ್ಯಕ್ತಿತ್ವ ವಿಕಸನದ ಜೊತೆ ಜೊತೆಗೆ ಆ ಗ್ರಾಮದ ನಾಗರಿಕರಲ್ಲಿ ವಿವಿಧ ವಿಷಯಗಳ ಅರಿವು ಉಂಟಾಗುತ್ತದೆ ಎಂದು ತಹಶೀಲ್ದಾರ ಮಹ್ಮದ್ ಝುಬೈರ್ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಶ್ರೀನಿವಾಸಪುರ (ಗಂಗಾಜಲ ತಾಂಡ) ಗ್ರಾಮದಲ್ಲಿ `ಯುವಶಕ್ತಿಯೇ ದೇಶದ ಶಕ್ತಿ~ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.ನಗರಸಭೆ ಆಯುಕ್ತ ಎಂ.ಎಂ. ಕರಭೀಮಣ್ಣನವರ ಮಾತನಾಡಿ, ಏಳು ದಿವಸಗಳ ಕಾಲ ಗ್ರಾಮದಲ್ಲೇ ಇದ್ದು, ನಿಸ್ವಾರ್ಥ ಮನೋಭಾವದಿಂದ ಗ್ರಾಮ ಸ್ವಚ್ಛತೆ ಸೇರಿದಂತೆ ಅನೇಕ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದಲ್ಲಿ ಶ್ರಮದಾನ ಮಾಡಿ, ಗ್ರಾಮಸ್ಥರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದೀರಿ, ಇದು ಇತರ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.ಪ್ರಾಚಾರ್ಯ ಪ್ರೊ.ಬಿ.ಆರ್. ಪಾಟೀಲ, ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಗ್ರಾಮದ ಮುಖಂಡರು ಮತ್ತು ಸಮಸ್ತ ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಅರುಣಕುಮಾರ ಚಂದನ್ ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಲಮಾಣಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಅಶೋಕ ಚವ್ಹಾಣ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ ಡಿ.ನಾಯಕ, ಗ್ರಾಮದ ಮುಖಂಡರಾದ ಕೃಷ್ಣಮೂರ್ತಿ ಲಮಾಣಿ, ಈರಪ್ಪ ಲಾ.ಚವ್ಹಾಣ, ನಾರಾಯಣ ಲ.ಲಮಾಣಿ, ದೈಹಿಕ ಶಿಕ್ಷಣ ನಿರ್ದೇಶಕ ರಾಮಾಂಜನೇಯಲು, ಸಹ ಪ್ರಾಧ್ಯಾಪಕರಾದ ಡಾ.ಅಶೋಕ ಕುರ್ಲಿ ಉಪಸ್ಥಿತರಿದ್ದರು.ಎನ್.ಎಸ್.ಎಸ್.ಕಾರ್ಯಕ್ರಮಾ ಧಿಕಾರಿ ಬಿ.ರವಿ, ಪ್ರೊ.ಆರ್.ಎಫ್. ಅಯ್ಯನಗೌಡ್ರ, ಗೀತಾ ವಾಲೀಕಾರ, ಎಲ್.ವಿ.ಸಂಗಳದ, ಎನ್.ಎಸ್.ಎಸ್. ಶಿಬಿರಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಪಾಲ್ಗೊಂಡಿದ್ದರು.

ಸೀಮಾ ಸಾವುಕಾರ ಮತ್ತು ಶಾಂತಾ ಕೊಟ್ಟದ ನಿರೂಪಿಸಿದರು. ಮಧು ಕುಂಚೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry