ಶುಕ್ರವಾರ, ಮೇ 7, 2021
22 °C

ಶಿಸ್ತಿನ ವ್ಯಕ್ತಿತ್ವ ರೂಪಿಸಿಕೊಳ್ಳಲು ಬೆಲ್ಲದ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ಇಲ್ಲಿಯ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್.ಎಸ್.ಎಸ್. ಚಟುವಟಿಕೆಗಳ ಮುಕ್ತಾಯ ಸಮಾರಂಭ ಸೋಮವಾರ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಾಣಿಜ್ಯೋದ್ಯಮಿ ಸಿ.ಸಿ.ಬೆಲ್ಲದ ಮಾತ ನಾಡಿ, ಸಮಯ ಪಾಲನೆ, ಸನ್ನಡತೆ, ಶಿಸ್ತು, ಕರ್ತವ್ಯ ನಿರ್ವಹಣೆ ಮುಂತಾದ ಗುಣಗಳೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕಿದೆ. ಮೌಲ್ಯಗಳಿಂದ ವಿಮುಖರಾಗಿ ದಾರಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ. ಕಲಿತ ಶಾಲೆ, ಕಾಲೇಜುಗಳಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತಮ ಭವಿಷ್ಯ ಹೊಂದುವಂತೆ ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಕಿರುತೆರೆ ನಟ ಕೆ.ಆರ್. ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಾದ ಭವಿಷ್ಯವನ್ನು ರೂಪಿಸಿಕೊಂಡು ಬರೀ ವೈಯಕ್ತಿಕ ಬದುಕು ನಡೆಸದೇ ಸಾಮಾಜಿಕ ಆಗುಹೋಗುಗಳಿಗೂ ಸಹ ಸ್ಪಂದಿಸಬೇಕಾದ ಅವಶ್ಯಕತೆ ಇದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ದೇಶೀಯ ಸೊಗಡಿನ ಕಲೆಗಳು ನಶಿಸುತ್ತಿವೆ. ಭಾರತೀಯ ಸಂಸ್ಕೃತಿ ಮತ್ತೆ ವಿಜೃಂಭಿಸಬೇಕಾದರೆ ಯುವ ಪೀಳಿಗೆ ಜವಾಬ್ದಾರಿ ಅರಿತು ವರ್ತಿಸಬೇಕಿದೆ ಎಂದು ಅವರು ನುಡಿದರು.ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಂಶುಪಾಲ ಪ್ರೊ.ಬಿ.ಟಿ. ಲಮಾಣಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನಿಟ್ಟುಕೊಂಡು ಕಾಲೇಜಿನಲ್ಲಿ ಸುಸಜ್ಜಿತ ಗಣಕಯಂತ್ರ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಣಕಯಂತ್ರ ಅನಿವಾರ್ಯ ಮತ್ತು ಅವಶ್ಯವಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಶಿಕ್ಷಣ ನೀಡಲು ಸಂಕಲ್ಪಿಸಲಾಗಿದೆ.ವಿದ್ಯಾರ್ಥಿಗಳು ಕಂಪ್ಯೂಟ್‌ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಇನ್ನೂ ಹೆಚ್ಚಿನ ಕೋರ್ಸುಗಳನ್ನು ಪರಿಚಯಿಸುವ ಇಂಗಿತ ವ್ಯಕ್ತಪಡಿಸಿದರು. ಎನ್.ಎಸ್. ಎಸ್. ಯೋಜನಾಧಿಕಾರಿ ಡಾ. ಸುರೇಶ ದೊಡ್ಡಮನಿ, ಕ್ರೀಡಾ ವೇದಿಕೆ ಸಂಚಾಲಕ ಲಕ್ಷ್ಮಣನಾಯ್ಕ ಎಚ್, ಕಾಲೇಜಿನ ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಐ.ಬಿ. ಹೂಗಾರ, ರಾಜಶೇಖರ ಪರೇಗೊಂಡರ, ಉಪನ್ಯಾಸಕರಾದ ಪೂರ್ಣಿಮಾ ಬಿ.ಎಚ್, ರಶ್ಮಿ ಕರ್ಕಿ, ಗ್ರಂಥಪಾಲಕ ಲಕ್ಷ್ಮಣ ಬಾರ್ಕಿ, ಮಹಾಂತೇಶ ಮರಿ ಗೂಳಪ್ಪನವರ ಸೇರಿದಂತೆ ಇನ್ನೂ ಹಲವರು ಈ ವೇಳೆ ಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು.ಸಂಯುಕ್ತಾ ಜಾಧವ ಸಂಗಡಿಗರು ಪ್ರಾರ್ಥನೆ ಹಾಡಿದರು. ಮಂಜುನಾಥ ಬಾರ್ಕಿ ಸ್ವಾಗತ ಕೋರಿದರು. ಪ್ರಭು ಸಂಗೂರ ಅತಿಥಿಗಳನ್ನು ಪರಿಚಯಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಂ.ಎಂ.ಪಾಟೀಲ ಕಾರ್ಯಕ್ರಮವನ್ನು  ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.