ಶಿಸ್ತುಕ್ರಮಕ್ಕೆ ಬದ್ಧ, ಅಧಿಕಾರ ತ್ಯಾಗಕ್ಕೆ ಬಿಜೆಪಿ ಸಿದ್ಧ - ಸದಾನಂದಗೌಡ

7

ಶಿಸ್ತುಕ್ರಮಕ್ಕೆ ಬದ್ಧ, ಅಧಿಕಾರ ತ್ಯಾಗಕ್ಕೆ ಬಿಜೆಪಿ ಸಿದ್ಧ - ಸದಾನಂದಗೌಡ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ) (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 9ರಂದು ಹಾವೇರಿಯಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಮಾವೇಶದಲ್ಲಿ ಭಾಗವಹಿಸುವ ಬಿಜೆಪಿ ಶಾಸಕರ ವಿರುದ್ಧ ಶಿಸ್ತು ಕ್ರಮಗೊಳ್ಳುವುದು ಶತಃಸಿದ್ಧ ಎಂದು ಗುರುವಾರ ಹೇಳಿದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರು ಅದಕ್ಕಾಗಿ ಬಿಜೆಪಿ ಅಧಿಕಾರ ಕೂಡ ತ್ಯಾಗ ಮಾಡಲು ಸಿದ್ಧವಿದೆ ಎಂದರು.ಸುವರ್ಣ ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಹಾವೇರಿಯಲ್ಲಿ ನಡೆಯುವ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸುವ ಬಿಜೆಪಿ ಶಾಸಕರ ವಿರುದ್ಧ ಕ್ರಮಕೈಗೊಳ್ಳುವ ವಿಷಯದಲ್ಲಿ ಪಕ್ಷ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಒಂದು ವೇಳೆ ಅಧಿಕಾರ ತ್ಯಾಗ ಮಾಡಬೇಕಾಗಿ ಬಂದರೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry