ಶೀಘ್ರದಲ್ಲಿ ಕಸಾಪ ಭವನ ನಿರ್ಮಾಣ
ಶಹಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ಈಗಾ ಗಲೇ 10 ಲಕ್ಷ ಬಿಡುಗಡೆಗೊಳಿಸಲಾ ಗಿದೆ. ಶಾಸಕರ ಅನುದಾನದಲ್ಲಿ ಇನ್ನೂ 10 ಲಕ್ಷ ನೀಡುವುದಾಗಿ ಶಾಸಕ ಶರಣ ಬಸಪ್ಪ ದರ್ಶನಾಪೂರ ಭರವಸೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ಲಿಂಗಣ್ಣ ಪಡಶೆಟ್ಟಿ ರಚಿದ ‘ಸಾಹುಕಾರ ಗದ್ಲ’ ನಾಟಕದ ಕೃತಿ ಬಿಡುಗಡೆಗೊಳಿಸಿ ಮಾತ ನಾಡಿ, ಗುಲ್ಬರ್ಗದ ದಿ.ಬಾಪುಗೌಡ ರಂಗ ಮಂದಿರ ನಿರ್ಮಾಣದ ಕಾಮ ಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೂ 50 ಲಕ್ಷ ಹಣದ ಅವಶ್ಯಕತೆ ಯಿದೆ. ಹೈದರಬಾದ ಕರ್ನಾಟಕ ಅಭಿ ವೃದ್ಧಿ ಮಂಡಳಿ ವತಿಯಿಂದ ಹಾಗೂ ಜಿಲ್ಲೆಯ ಶಾಸಕರ ಅನುದಾನದಲ್ಲಿ ಇನ್ನಷ್ಟು ಅನುದಾನವನ್ನು ಬಿಡುಗಡೆಗೆ ಮನವಿ ಮಾಡಿ ರಂಗಮಂದಿರವನ್ನು ಪೂರ್ಣಗೊಳಿಸಲಾಗುವುದು. ಈಗಾ ಗಲೇ ಕಟ್ಟಡ ಕಾಮಗಾರಿಗೆ 2 ಕೋಟಿ ವೆಚ್ಚ ಮಾಡ ಲಾಗಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ನಾಗಣ್ಣಗೌಡ ಸುಬೇದಾರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಿವಣ್ಣಗೌಡ ಪಾಟೀಲ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರ ಬೋಳ, ವೀರಶೈವ ಸಮಾಜದ ರಾಜ್ಯಾ ಧ್ಯಕ್ಷ ದೇವರಾಯ ನಾಡೆಪಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರ ಭಧ್ರ ಸಿಂಪಿ, ತಾಲ್ಲೂಕು ಅಧ್ಯಕ್ಷ ಸಿದ್ದ ಲಿಂಗಪ್ಪ ಆನೇಗುಂದಿ, ಲೇಖಕ ಲಿಂಗಣ್ಣ ಪಡಶೆಟ್ಟಿ, ಗುರುನಾಥರಡ್ಡಿ, ಸಯ್ಯದ್ ಮುಸ್ತಾಫ್ ದರ್ಬಾನ್, ಮಾಣಿಕರಡ್ಡಿ ಗೋಗಿ, ಬಸವರಾಜ ಮತ್ತಿತರರು ಉಪಸ್ಥಿತರಿದ್ದರು. ಸಾಹುಕಾರ ಗದ್ಲ ಕೃತಿಯ ಬಗ್ಗೆ ವಿಮರ್ಶೆಯನ್ನು ಡಾ.ಎಂ.ಎಸ್.ಸಿರವಾಳ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.