ಶೀಘ್ರದಲ್ಲೇ ಇಸ್ಪತ್ ಐಪಿಒ ಬಿಡುಗಡೆ

7

ಶೀಘ್ರದಲ್ಲೇ ಇಸ್ಪತ್ ಐಪಿಒ ಬಿಡುಗಡೆ

Published:
Updated:
ಶೀಘ್ರದಲ್ಲೇ ಇಸ್ಪತ್ ಐಪಿಒ ಬಿಡುಗಡೆ

ನವದೆಹಲಿ (ಪಿಟಿಐ): ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್‌ನ (ಆರ್‌ಐಎನ್‌ಎಲ್) ರೂ 2,500 ಕೋಟಿ ಮೊತ್ತದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು  ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಸೋಮವಾರ ಇಲ್ಲಿ ಆರ್ಥಿಕ ಸಂಪಾದಕರ ಸಮ್ಮೇಳನದಲ್ಲಿ ಹೇಳಿದರು.`ಆರ್‌ಐಎನ್‌ಎಲ್~ `ಐಪಿಒ~ ಮೂಲಕ ಸರ್ಕಾರಿ ಸ್ವಾಮ್ಯದ ಪ್ರಮುಖ ಕಂಪೆನಿಗಳ (ಪಿಎಸ್‌ಯು) ಷೇರು ವಿಕ್ರಯಕ್ಕೆ ಚಾಲನೆ ನೀಡಲಾಗುವುದು. ಮುಂದಿನ ಆರು ತಿಂಗಳಲ್ಲಿ `ಎನ್‌ಎಂಡಿಸಿ, ಎನ್‌ಟಿಪಿಸಿ, ಪವರ್ ಗ್ರಿಡ್ ಕಾರ್ಪೊರೇಷನ್, ಎಂಜಿನಿಯರ್ಸ್ ಇಂಡಿಯಾ ಸೇರಿದಂತೆ ಪ್ರಮುಖ `ಪಿಎಸ್‌ಯು~ಗಳ `ಐಪಿಒ~ ಬಿಡುಗಡೆಯಾಗಲಿದೆ.

ಈ ಮೂಲಕ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು ರೂ30 ಸಾವಿರ ಕೋಟಿ  ಸಂಗ್ರಹಿಸುವ ವಿಶ್ವಾಸ ಇದೆ ಎಂದರು.  ಷೇರು ಮಾರುಕಟ್ಟೆ ಅಸ್ಥಿರತೆಯಿಂದ `ಆರ್‌ಐಎನ್‌ಎಲ್~ `ಐಪಿಒ~ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಆದರೆ, ಉನ್ನತಾಧಿಕಾರ ಸಚಿವರ ಸಮಿತಿ ಅ.9ರಂದು ಸಭೆ ಸೇರಲಿದ್ದು `ಐಪಿಒ~ ಬಿಡುಗಡೆ ದಿನ ನಿಗದಿ ಮಾಡಲಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry