ಶೀಘ್ರದಲ್ಲೇ ದೋಷಾರೋಪ ಪಟ್ಟಿ

7
ದೇವಯಾನಿ ವೀಸಾ ವಂಚನೆ ಪ್ರಕರಣ

ಶೀಘ್ರದಲ್ಲೇ ದೋಷಾರೋಪ ಪಟ್ಟಿ

Published:
Updated:

ನ್ಯೂಯಾರ್ಕ್‌ (ಪಿಟಿಐ): ವೀಸಾ ವಂಚನೆ ಪ್ರಕರಣದ  ಪ್ರಾಥಮಿಕ ವಿಚಾ­ರಣೆ­ಗೆ ನಿಗದಿಪಡಿಸಿರುವ ಈ ತಿಂಗಳ ೧೩ರ ಗಡುವನ್ನು ವಿಸ್ತರಿಸಬೇಕೆಂದು ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಸಲ್ಲಿಸಿದ ಅರ್ಜಿಯನ್ನು ಅಮೆರಿಕದ ಫೆಡರಲ್‌ ನ್ಯಾಯಾಲಯ ತಿರಸ್ಕರಿಸಿದೆ.ವಿಚಾರಣೆ ಮುಂದೂಡಲು ಅರ್ಜಿ­ದಾರರು ನೀಡಿರುವ ಕಾರಣಗಳು ‘ಯೋಗ್ಯವಾಗಿಲ್ಲ’ ಎಂದು ನ್ಯಾಯಾ­ಧೀಶರು ಅಭಿಪ್ರಾಯ­ಪಟ್ಟಿದ್ದಾರೆ.

ಅರ್ಜಿ ತಿರಸ್ಕಾರವಾಗಿದೆ ಎಂದ ಮಾತ್ರಕ್ಕೆ ವೀಸಾ ಪ್ರಕರಣಕ್ಕೆ ಸಂಬಂಧಿ­ಸಿದಂತೆ ಸರ್ಕಾರ ಮತ್ತು ದೇವಯಾನಿ ನಡುವಣ ಸಂಧಾನ ಮಾತುಕತೆಗೆ ಅಡ್ಡಿ ಉಂಟಾಗುವುದಿಲ್ಲ ಎಂದು  ನ್ಯಾಯಾಧೀಶೆ ಸಾರಾ ನೆಟ್‌ಬರ್ನ್‌ ಆದೇಶದಲ್ಲಿ ಹೇಳಿದ್ದಾರೆ.ಪ್ರಾಥಮಿಕ ವಿಚಾರಣೆಗೆ ಸಂಬಂಧಿ­ಸಿದ ದಿನಾಂಕ ಮುಂದೂಡುವುದು ದೋಷಾ­ರೋಪ ಪಟ್ಟಿ ಸಲ್ಲಿಸುವುದರ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ನ್ಯಾಯಾಧೀಶರು ಮೂರು ಪುಟಗಳ ಆದೇಶ ನೀಡಿದ್ದು ದೇವಯಾನಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಈ ತಿಂಗಳ ೧೩ ಅಥವಾ ಅದಕ್ಕೂ ಮೊದಲೇ ದಾಖಲಿಸಬಹುದಾಗಿದೆ.‘ದೇವಯಾನಿ ಪರ ಇತರ ಮಾರ್ಗ­ಗಳನ್ನು ಹುಡುಕುತ್ತೇವೆ’ ಎಂದು ಅವರ ವಕೀಲ ಡೇನಿಯಲ್‌ ಅರ್‌ಶಾಕ್‌ ಹೇಳಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಕೆ ದಿನದ ಗಡುವು ವಿಸ್ತರಣೆಗೆ ಸಂಬಂಧಿಸಿದಂತೆ ದೇವ­ಯಾನಿ ಅವರು ಮತ್ತೊಂದು ಅರ್ಜಿ ಸಲ್ಲಿಸಬೇಕು. ಈ ಆಯ್ಕೆ ಮಾತ್ರ ಅವರ ಮುಂದಿದೆ ಎನ್ನುತ್ತವೆ ಮೂಲಗಳು.ಜಿ ವೀಸಾ ವಿಳಂಬ:  ಈ ಮಧ್ಯೆ ದೇವ­ಯಾನಿ ಅವರನ್ನು ವಿಶ್ವಸಂಸ್ಥೆಗೆ  ನೇಮಕ ಮಾಡಿ 20 ದಿನಗಳು ಕಳೆದರೂ ದೇವ­ಯಾನಿ ಅವರ ‘ಜಿ ವೀಸಾ’ ಅರ್ಜಿ ಪರಿಶೀ­ಲನೆ­ಯನ್ನು ಅಮೆರಿಕ ಮುಂದುವರಿಸಿದೆ.ಖೋಬ್ರಾಗಡೆ ಅವರಿಗೆ ಜಿ ವೀಸಾ ನೀಡು­ವುದಕ್ಕೆ ಸಂಬಂಧಿಸಿದಂತೆ ವಿಳಂಬ­ವಾದರೆ ಅವರ ಬಂಧನದ ಸಾಧ್ಯತೆ ಇದೆ ಎನ್ನುವ ಆತಂಕ ಭಾರತದ ರಾಜ­ತಾಂತ್ರಿಕ ಅಧಿಕಾರಿಗಳನ್ನು ಕಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry