ಶುಕ್ರವಾರ, ನವೆಂಬರ್ 22, 2019
23 °C

ಶೀಘ್ರದಲ್ಲೇ ಬಜಾಜ್ ಕಾರು ಮಾರುಕಟ್ಟೆಗೆ

Published:
Updated:

ಮುಂಬೈ (ಪಿಟಿಐ): ಬಜಾಜ್ ಆಟೊ ಕಂಪೆನಿಯ ಪುಟ್ಟ ಕಾರು `ಆರ್‌ಇ-60' ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ನಾಲ್ಕು ಆಸನಗಳಿರುವ ಈ ವಾಹನವನ್ನು ಯಾವ ವಿಭಾಗಕ್ಕೆ ಸೇರಿಸಬೇಕು ಎನ್ನುವುದರ ಕುರಿತು ಸರ್ಕಾರ ನೇಮಿಸಿದ ಸಮಿತಿ ವರದಿ ಸಲ್ಲಿಸಲಿದೆ.ನಂತರ  ಪೂರ್ಣ ಪ್ರಮಾಣದ ವಾಣಿಜ್ಯ ತಯಾರಿಕೆ ಆರಂಭವಾಗಲಿದೆ. ಸದ್ಯ ಇಂತಹ 5 ಸಾವಿರ ಕಾರುಗಳನ್ನು ಔರಂಗಾಬಾದ್ ತಯಾರಿಕಾ ಘಟಕದಲ್ಲಿ  ತಯಾರಿಸಲಾಗುತ್ತಿದ್ದು ಏಪ್ರಿಲ್ ಅಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)