ಸೋಮವಾರ, ಏಪ್ರಿಲ್ 19, 2021
32 °C

ಶೀಘ್ರದ್ಲ್ಲಲೇ ಭತ್ತದ ಬೆಳೆ ವಿಮೆ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಕಳೆದ ವರ್ಷ  ಭತ್ತದ ಬೆಳೆ ವಿಮಾ ಯೋಜನೆ ಬಿಡುಗಡೆಯಲ್ಲಿ ತಾಂತ್ರಿಕ ಲೋಪ- ದೋಷವಾಗಿದ್ದು, ಶ್ರೀಘ್ರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಭತ್ತದ ಬೆಳೆಗೆ ವಿಮಾ ಯೋಜನೆಯನ್ನು ಬಿಡುಗಡೆ ಮಾಡುವುದಾಗಿ  ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ದುಂಡಸಿ ಗ್ರಾಮದಲ್ಲಿ ಭಾನುವಾರ ನಡೆದ ರೈತ ಸಭೆಯಲ್ಲಿ ಅವರು ಮಾತನಾಡಿ,  ಕಳೆದ 2010ರಲ್ಲಿ ರೂ 2.5ಕೋಟಿ , 2011ನೇ ಸಾಲಿನಲ್ಲಿ ರೂ 6 ಕೋಟಿ, 2012ನೇ ಸಾಲಿನಲ್ಲಿ  ರೂ 85 ಲಕ್ಷ ವಿಮಾ ಯೋಜನೆ ಹಣ ಬಿಡುಗಡೆಯಾಗಿದೆ. ಸ್ಥಳೀಯ ಸೊಸೈಟಿ ಸದಸ್ಯತ್ವ ಹಾಗೂ ಸಾಲ ಪಡೆದವರಲ್ಲಿ ಪ್ರತಿ ವರ್ಷ ಬೆಳೆ ವಿಮಾ ಕಂತನ್ನು ತುಂಬಿಸಲಾಗುತ್ತದೆ. ಅದರಂತೆ ಇತರ ರೈತರು ಸಹ ವಿಮಾ ಯೋಜನೆ ಕಂತನ್ನು ತುಂಬಬೇಕಾಗುತ್ತದೆ. ಇದನ್ನು ರೈತರು ಅರಿಯಬೇಕು ಎಂದು ಹೇಳಿದರು.

ಕೂಡಲೇ ಅಧಿಕಾರಿಗಳ ಸಭೆ ಕರೆದು ಹಾನಿ ಕುರಿತು ವರದಿ ಪಡೆಯಲಾಗುವುದು. ಅಲ್ಲದೆ ಪುನರ್ ಪರಿಶೀಲನೆ ಮಾಡುವ ಮೂಲಕ ವಿಮೆ ಹಣ ಬಿಡುಗಡೆ ಕ್ರಮ ಕೈಗೊಳ್ಳಲಾಗುವುದು.  ಸ್ಥಳೀಯ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಯಾಗಿ ಎರಡು ದಿನಗಳಲ್ಲಿ ಸರಿಯಾದ ವರದಿ ಸಲ್ಲಿಸಬೇಕು ಎಂದು ಅಧಿಕಾರಿ ಗಳಿಗೆ ಸೂಚಿಸಿದರು. ಈ ವಿಷಯದಲ್ಲಿ ರೈತರ ಸಹಕರಿಸಬೇಕು ಎಂದು ಸಚಿವರು ತಿಳಿಸಿದರು.

ತಾ.ಪಂ.ಸದಸ್ಯ ಈಶ್ವರಗೌಡ ಪಾಟೀಲ ಮಾತನಾಡಿ ಈ ಭಾಗದಲ್ಲಿ ಭತ್ತದ ಬೆಳೆ ಪ್ರಮುಖವಾಗಿದ್ದು, ವಿಮಾ ಯೋಜನೆ ಮಂಜು ರಾತಿ ನೀಡದೆ ಸುಮಾರು 444  ಎಕರೆ ಭೂಮಿ ಯಲ್ಲಿ ತೊಗರಿ ಮತ್ತು ಸಾವಿ ಬೆಳೆ ಬೆಳೆದಿದ್ದಾರೆ ಎಂದು ಸುಳ್ಳು ದಾಖಲಾತಿ ಸೃಷ್ಟಿಸಿ  ತೊಗರಿ ಮತ್ತು ಸಾವಿ ಬೆಳೆಗೆ ವಿಮಾ ನೀಡಿದ ಅಧಿಕಾರಿಗಳ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಕರಿತು ಕಳೆದ ವರ್ಷವೇ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯತೆ ವಹಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ತಾಲ್ಲೂಕು ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿ.ಪಂ.ಸದಸ್ಯರಾದ ಸಿ.ಎಸ್.

ಪಾಟೀಲ, ಸರೋಜಾ ಆಡಿನ, ಶಶಿಧರ ಹೊನ್ನಣವರ, ವಕೀಲರ ಸಂಘದ ಅಧ್ಯಕ್ಷ ಎಸ್. ಕೆ. ಅಕ್ಕಿ, ತಹಶೀಲ್ದಾರ ಎಚ್.ಕೊಟ್ರೇಶ, ಜಿಲ್ಲಾ ಕೃಷಿ ಅಧಿಕಾರಿ ಗಣೇಶ ನಾಯ್ಕರ, ತಾಲ್ಲೂಕು ಕೃಷಿ ಸಹಾಯ ನಿರ್ದೇಶಕ ಶಿವಕುಮಾರ ಮಲ್ಲಾಡದ, ಎಪಿಎಂಸಿ ಮಾಜಿ ಅಧ್ಯಕ್ಷ ಭರಮಗೌಡ್ರ ಪಾಟೀಲ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.