ಸೋಮವಾರ, ಅಕ್ಟೋಬರ್ 21, 2019
21 °C

ಶೀಘ್ರವೇ ನೂತನ ವಿಜ್ಞಾನ ನೀತಿ

Published:
Updated:

ಭುವನೇಶ್ವರ (ಪಿಟಿಐ): `ವಿಜ್ಞಾನವನ್ನು ಜನತೆಯ ಒಳಿತಿಗಾಗಿ ಬಳಸಬೇಕು~ ಎಂದು ಬಲವಾಗಿ ಪ್ರತಿಪಾದಿಸಿದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ವಿಲಾಸ್‌ರಾವ್ ದೇಶ್‌ಮುಖ್, ಈ ಕ್ಷೇತ್ರವನ್ನು ನಿರ್ವಹಿಸಲು ಹಾಗೂ ಹೊಸತನವನ್ನು ಉತ್ತೇಜಿಸಲು ಶೀಘ್ರವೇ ನೂತನ ನೀತಿಯನ್ನು ಪ್ರಕಟಿಸಲಾಗುತ್ತದೆ ಎಂದು ಮಂಗಳವಾರ ತಿಳಿಸಿದರು.`ನಮಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನೂತನ ನೀತಿಯ ಅಗತ್ಯವಿದೆ. ಇಂಥ ವಿವೇಚನಾಯುಕ್ತವಾದ ನೀತಿಯನ್ನು ನನ್ನ ಸಚಿವಾಲಯ ಶೀಘ್ರವೇ ರೂಪಿಸಲಿದೆ~ ಎಂದು ಹೇಳಿದರು.

Post Comments (+)