ಶೀಘ್ರವೇ ಮಸೂದೆ ಜಾರಿಗೆ ತರಲು ಚಿಂತನೆ

7

ಶೀಘ್ರವೇ ಮಸೂದೆ ಜಾರಿಗೆ ತರಲು ಚಿಂತನೆ

Published:
Updated:

ಹಾವೇರಿ: ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆ, ಕಾಲೇಜುಗಳಲ್ಲಿ ಕ್ರೀಡಾಪಟುಗಳಿಗಾಗಿ ಪ್ರತ್ಯೇಕ ಮೀಸಲಾತಿ ನೀಡುವ ಮಸೂದೆ ಜಾರಿಗೆ ತರುವ ಚಿಂತನೆ ನಡೆದಿದೆ ಎಂದು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಹೇಳಿದರು.ಬುಧವಾರ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣ, ಕ್ರೀಡಾ ವಸತಿ ನಿಲಯ ಹಾಗೂ ಈಜುಗೊಳ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಕೆಲವೊಂದು ಕ್ರೀಡಾಪಟುಗಳು ಕ್ರೀಡಾ ವಸತಿ ನಿಲಯಗಳ ವ್ಯಾಪ್ತಿಯಲ್ಲಿ ಉತ್ತಮ ಶಿಕ್ಷಣ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಬೇರೆ ಶಿಕ್ಷಣ ಸಂಸ್ಥೆ ಗಳಲ್ಲಿ ಪ್ರವೇಶ ಪಡೆಯಲು ಮುಂದಾಗು ತ್ತಾರೆ. ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರೆಯದೇ ಕ್ರೀಡಾಪಟುಗಳು ನಿರಾಸೆ ಅನುಭವಿಸುತ್ತಾರೆ. ಹೀಗಾಗಿ ಕ್ರೀಡಾಪಟುಗಳಿಗೆ ಸೀಟುಗಳನ್ನು ಉದ್ದೇಶದಿಂದ ಈ ಮೀಸಲಾತಿ ಮಸೂದೆ ಜಾರಿಗೆ ತರಲಾಗುವುದು ಎಂದರು.ಈ ಕಾಯ್ದೆ ಜಾರಿಗೆ ಶಾಸಕರ ಸಹಕಾರ ಅತ್ಯವಶ್ಯವಾಗಿದ್ದು, ಕ್ರೀಡಾಪಟು ಗಳ ಹಾಗೂ ಅವರ ಶಿಕ್ಷಣ ಪ್ರೋತ್ಸಾ ಹಿಸುವ ಉದ್ದೇಶದಿಂದ ಇದು ಅಗತ್ಯವಾ ಗಿದೆ ಎಂದು ಪ್ರತಿಪಾದಿಸಿದರು.ಪ್ರತಿ ಜಿಲ್ಲೆಗಳಲ್ಲಿರುವ ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಕ್ರೀಡಾ ಸಮಿತಿಗಳನ್ನು ಶಾಸಕರ ನೇತೃತ್ವ ದಲ್ಲಿ ಪುನರ್‌ರಚನೆ ಮಾಡುವುದರ ಜತೆಗೆ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಪಟುಗಳ ವಿಮೆ ಅಳವಡಿಸುವ ಯೋಜನೆ ಜಾರಿಗೆ ತರಲಾಗುವುದು. ಅದಕ್ಕೆ ಆ ಸಮಿತಿಗಳೇ ಕ್ರೀಡಾಪಟು ಗಳನ್ನು ಆಯ್ಕೆ ಮಾಡಲಿದೆ ಎಂದರು ತಿಳಿಸಿದರು.ಕ್ರೀಡಾಶಾಲೆಗಳಲ್ಲಿ ಖಾಲಿ ಇರುವ ತರಬೇತುದಾರರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಯಾವ ಪ್ರದೇಶದಲ್ಲಿ ಯಾವ ಕ್ರೀಡೆಗೆ ಹೆಚ್ಚಿನ ಮಾನ್ಯತೆಯಿದೆಯೋ ಆ ಕ್ರೀಡೆಗೆ ಮಂಡಳಿ ಸ್ಥಾಪನೆ ಮಾಡಲಾಗುವುದು.ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದ ಹಣದ ಸೋರಿಕೆ ಹಾಗೂ ಅನವಶ್ಯಕ ಖರ್ಚು ಆಗುತ್ತಿರುವುದಕ್ಕೆ ಕಡಿವಾಣ ಹಾಕಲಾಗಿದ್ದು, ಅದೇ ಹಣವನ್ನು ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗೌರವಿಸಿ ಪ್ರೋತ್ಸಾಹಿಸಲು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್‌ನಲ್ಲಿ ಪ್ರಶಸ್ತಿ ಪಡೆದ ಕ್ರೀಡಾಪಟುಗಳಿಗೆ ಐದು ಲಕ್ಷ ರೂ.ನಗದು ಬಹುಮಾನ ನೀಡ ಲಾಗಿದೆ. ಪ್ಯಾರಾ ಒಲಿಂಪಿಕ್‌ನಲ್ಲಿ ಪದಕ ವಿಜೇತ ಕ್ರೀಡಾಪಟುವಿಗೆ 25 ಲಕ್ಷ ರೂ. ನೀಡಲಾಗಿದೆ. ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಎರಡು ಲಕ್ಷ ರೂ.ನಗದು ಬಹುಮಾನ ನೀಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಜಿ. ಪಂ.ಮಾಜಿ ಅಧ್ಯಕ್ಷ ಡಾ.ಮಲ್ಲೇಶಪ್ಪ ಹರಿ ಜನ ಅಲ್ಲದೇ ಅನೇಕರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry