ಶೀಘ್ರ ಅಗ್ನಿನಿರೋಧಕ ಉಡುಪು

7

ಶೀಘ್ರ ಅಗ್ನಿನಿರೋಧಕ ಉಡುಪು

Published:
Updated:

ಅಹಮದಾಬಾದ್ (ಪಿಟಿಐ): ಅಗ್ನಿಶಾಮಕ ಸಿಬ್ಬಂದಿ ಹಾಗೂ ಬೆಂಕಿ ಸಂಬಂಧಿ ಉದ್ದಿಮೆಗಳಲ್ಲಿ ತೊಡಗಿರುವವರಿಗೆ ಸಂತಸ ಸುದ್ದಿಯೊಂದನ್ನು ಅಹಮದಾಬಾದ್ ಜವಳಿ ಉದ್ದಿಮೆಗಳ ಸಂಶೋಧನಾ ಸಂಸ್ಥೆ ನೀಡಿದೆ.ಬೆಂಕಿ ನಿರೋಧಕ ಇಂತಹ ಉಡುಪನ್ನು ಸದ್ಯ ಆಮದು ಮಾಡಿಕೊಳ್ಳಬೇಕಿದ್ದು ಇಂತಹ ಉಡುಪಿನ ಬೆಲೆ ಅಂದಾಜು ರೂ 1.5 ಲಕ್ಷ ಆಗಲಿದೆ.ದುಬಾರಿ ದರದ ಇಂತಹ ಮಾದರಿಯ ಉಡುಪನ್ನು ಕಡಿಮೆ ದರದಲ್ಲಿ ನಮ್ಮಲ್ಲೇ ಸಿದ್ಧಪಡಿಸುವ ತಂತ್ರಜ್ಞಾನಕ್ಕೆ ನಾವೀಗ ಆದ್ಯತೆ ನೀಡಿದ್ದು ಇವುಗಳು ಅಗ್ನಿಶಾಮಕ ಸಿಬ್ಬಂದಿಗೆ ವರದಾನವಾಗಲಿವೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎ.ಕೆ. ಶರ್ಮ ತಿಳಿಸುತ್ತಾರೆ.ತೈಲ ಸಂಬಂಧಿ ಉದ್ದಿಮೆಗಳಲ್ಲಿ ತೊಡಗಿರುವ ಸಿಬ್ಬಂದಿ ರಕ್ಷಣೆಗಾಗಿ ಬೆಂಕಿ ನಿರೋಧಕ ಬಟ್ಟೆಯನ್ನು ಅಭಿವೃದ್ಧಿಪಡಿಸಿದ ಕೀರ್ತಿಯೂ ನಮ್ಮ ಸಂಸ್ಥೆಯದೇ ಎನ್ನುವ ಶರ್ಮಾ, ಭಾರತೀಯ ಕಾರ್ಮಿಕರ ಕೆಲಸದ ಸ್ಥಳದ ಸ್ಥಿತಿಗತಿಗೆ ಅನುಗುಣವಾಗಿ ಇಂತಹ ಬಟ್ಟೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದೊಂದಿಗೆ ಸಿದ್ಧಪಡಿಸಲಾಗುತ್ತಿದೆ.ಉಕ್ಕು, ಗಣಿ ಇಲ್ಲವೆ ಫೌಂಡ್ರಿ ಉದ್ದಿಮೆಗಳ ಕಾರ್ಮಿಕರಿಗೆ ಸರಿಹೊಂದುವ ಬೆಂಕಿ ನಿರೋಧಕ ವಸ್ತ್ರ ಸಿದ್ಧಪಡಿಸುವಲ್ಲಿಯೂ ನಾವು ಗಮನಹರಿಸುತ್ತಿದ್ದೇವೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry