ಶೀಘ್ರ ಬರಲಿದೆ ಬಿದಿರಿನ ಮೊಬೈಲ್!

7

ಶೀಘ್ರ ಬರಲಿದೆ ಬಿದಿರಿನ ಮೊಬೈಲ್!

Published:
Updated:

ಲಂಡನ್(ಪಿಟಿಐ):  ಪ್ಲಾಸ್ಟಿಕ್, ಫೈಬರ್ ಮತ್ತು ಲೋಹಗಳಲ್ಲಿ ಮೊಬೈಲ್ ತಯಾರಿಸುವುದು ಸಾಮಾನ್ಯ. ಆದರೆ ಬಿದಿರಿನಿಂದಲೂ ಮೊಬೈಲ್ ತಯಾರಿಸಬಹುದೇ?ಹೌದು, ಎನ್ನುತ್ತಾರೆ ಬ್ರಿಟನ್‌ನ 23 ವರ್ಷದ ವಿದ್ಯಾರ್ಥಿ ಕೆರೊನ್ ಸ್ಕಾಟ್ ವುಡ್‌ಹೌಸ್.

ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಮೊಬೈಲ್‌ಗಳ ಕೊರತೆ ಇರುವುದನ್ನು ಮನಗಂಡ ಇವರು ತುಸು ವಿಭಿನ್ನವಾಗಿ ಯೋಚಿಸಿ, ಬಿಡುವಿನ ವೇಳೆಯಲ್ಲಿ ಬಿದಿರಿನ ಮೊಬೈಲ್ ತಯಾರಿಸಿದ್ದಾರೆ.ಲಂಡನ್‌ನ  ಮಿಡ್ಲ್‌ಸೆಕ್ಸ್  ವಿಶ್ವವಿದ್ಯಾಲಯದಲ್ಲಿ ವಸ್ತು ವಿನ್ಯಾಸ ಅಧ್ಯಯನ ಮಾಡುತ್ತಿರುವ ಕೆರೊನ್, ಈ ವರ್ಷದ ಅಂತ್ಯದ ವೇಳೆಗೆ ಯುರೋಪ್‌ನೆಲ್ಲೆಡೆ ಬಿದಿರಿನ ಮೊಬೈಲ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ.ಸಾವಯವ ವಿಧಾನದಲ್ಲಿ ಬೆಳೆದ ನಾಲ್ಕು ವರ್ಷದ ಬಿದಿರಿನ ಕಾಂಡವನ್ನು ಬಳಸಿ ವಿನ್ಯಾಸಗೊಳಿಸಿರುವ ಈ ಮೊಬೈಲ್ ಫೋನ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂಬುದು ತಜ್ಞರ ಅಭಿಪ್ರಾಯ.ಐಫೋನ್ ಗಾತ್ರದ ಅರ್ಧದಷ್ಟಿರುವ ಇದರಲ್ಲಿ ಸಾಮಾನ್ಯ ಮೊಬೈಲ್‌ಗಳಲ್ಲಿರುವ ತಂತ್ರಾಂಶ ಮತ್ತು ತಂತ್ರಜ್ಞಾನ ಕೂಡ ಲಭ್ಯ ಇದೆ. ಆದರೆ ಇದರಲ್ಲಿ  ಈಗಿರುವ ಮೊಬೈಲ್‌ಗಳಲ್ಲಿ ಲಭ್ಯವಿರದ   `ರಿಂಗ್ ಫ್ಲಾಶ್~ ಬಳಸಿರುವುದು ವಿಶೇಷ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry