ಮಂಗಳವಾರ, ನವೆಂಬರ್ 12, 2019
25 °C

ಶೀಘ್ರ ಬರಲಿದೆ ಬ್ಯಾಕ್ಟೀರಿಯಾ ಡೀಸೆಲ್!

Published:
Updated:

ಲಂಡನ್ (ಪಿಟಿಐ): ಬ್ಯಾಕ್ಟೀರಿಯಾದಿಂದ ಡೀಸೆಲ್ ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿದಿರುವುದಾಗಿ ಸಂಶೋಧಕರು ಹೇಳಿಕೊಂಡಿದ್ದಾರೆ.

ಪ್ರಖ್ಯಾತ ತೈಲ ಸಂಸ್ಥೆ `ಶೆಲ್' ಸಹಯೋಗದಲ್ಲಿ ಎಕ್ಸ್‌ಟೀರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಕೆಲವು ಸವಾಲುಗಳು ಎದುರಾಗಿವೆ.`ಸಕ್ಕರೆಯನ್ನು ಕೊಬ್ಬನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುವ `ಇ-ಕೊಲಿ' ಎಂಬ ಬ್ಯಾಕ್ಟೀರಿಯಾದಿಂದ ಉತ್ಪಾದಿಸಲಾಗುವ ಈ ಡೀಸೆಲ್ ಸಾಂಪ್ರದಾಯಿಕ ಇಂಧನವನ್ನೇ ಹೋಲುತ್ತವೆ. ಇತರ ಜೈವಿಕ ಇಂಧನಗಳಂತೆಯೇ ಇದನ್ನು ಬಳಸಲು ವಾಹನಗಳಲ್ಲಿ ಕೆಲವು ತಾಂತ್ರಿಕ ಮಾರ್ಪಾಡುಗಳನ್ನು ಮಾಡಬೇಕಾಗದ ಅಗತ್ಯ ಇಲ್ಲ' ಎನ್ನುವುದು ಎಕ್ಸ್‌ಟೀರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನ್ ಲವ್ ಅವರ ಅಭಿಪ್ರಾಯ.

ಈ ಸಮಸ್ಯೆ ನಿವಾರಿಸಿದಲ್ಲಿ ವಾಣಿಜ್ಯ ಬಳಕೆಯ ಡೀಸೆಲ್‌ನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎನ್ನುವುದು ಸಂಶೋಧಕರ ಅಭಿಮತ.

ಪ್ರತಿಕ್ರಿಯಿಸಿ (+)