ಬುಧವಾರ, ಮೇ 19, 2021
24 °C

ಶೀಘ್ರ ಮಹತ್ತರ ಆರ್ಥಿಕ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ):`ಮುಂದಿನ ಆರು ತಿಂಗಳಲ್ಲಿ ದೇಶ     ಲ್ಲಿ ಕೆಲವು ಮಹತ್ತರ ಆರ್ಥಿಕ ಸುಧಾರಣೆಗಳು ನಡೆಯಲಿವೆ~ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಕೌಶಿಕ್ ಬಸು ಹೇಳಿದ್ದಾರೆ.ಸಬ್ಸಿಡಿ ಕಡಿತ, ಡೀಸೆಲ್ ಬೆಲೆ ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವುದು ಮತ್ತು ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸುವುದು ಸೇರಿದಂತೆ ಮುಂದಿನ ಆರು ತಿಂಗಳಲ್ಲಿ ಮಹತ್ವದ ಆರ್ಥಿಕ ಸುಧಾರಣೆಗಳನ್ನು ಸರ್ಕಾರ ತರಲಿದೆ ಎಂದು ಅವರು ಇಲ್ಲಿ ನಡೆದ ವಿಚಾರಗೋಷ್ಠಿಯೊಂದರಲ್ಲಿ ಹೇಳಿದರು.ರಾಷ್ಟ್ರೀಯ ವಿಶೇಷ ಗುರುತಿನ ಸಂಖ್ಯೆ (ಯುಐಡಿ) ಮೂಲಕ ಸಬ್ಸಿಡಿ ಸೋರಿಕೆ ತಪ್ಪಿಸಲು ಹಣಕಾಸು ಸಚಿವಾಲಯ ಕ್ರಮ ಕೈಗೊಂಡಿದೆ. ಸಬ್ಸಿಡಿ ಕಡಿಮೆಯಾದರೆ, ದೇಶದ ವಿತ್ತೀಯ ಕೊರತೆ ಅಂತರ ತಗ್ಗಲಿದೆ. ಚಿಲ್ಲರೆ ವಲಯದಲ್ಲಿ `ಎಫ್‌ಡಿಐ~ಗೆ ಅವಕಾಶ ಕಲ್ಲಿಸುವುದು ಶೇ. 100ರಷ್ಟು ಖಾತ್ರಿ ಎಂದರು.

 

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮೂಲಕ ದೊಡ್ಡ ಪ್ರಮಾಣದ ಆರ್ಥಿಕ ಸುಧಾರಣೆ ನಿರೀಕ್ಷಿಸಲಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. `ಯೂರೋಪ್ ಬಿಕ್ಕಟ್ಟು 2014ರಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮತ್ತೊಂದು ಸುತ್ತಿನ ಜಾಗತಿಕ ಆರ್ಥಿಕ ಹಿಂಜರಿಕೆ ಎದುರಿಸಲು ದೇಶ ಸಿದ್ಧವಾಗಬೇಕಿದೆ~ ಎಂದರು.ಲೋಕಸಭೆ ಚುನಾವಣೆ ತನಕ ದೇಶದಲ್ಲಿ ಯಾವುದೇ ಮಹತ್ತರ ಆರ್ಥಿಕ ಸುಧಾರಣೆಗಳು ನಡೆಯುವುದಿಲ್ಲ ಎಂದು ಇತ್ತೀಚೆಗೆ ಬಸು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

 

ಹಿನ್ನಡೆ ಇಲ್ಲ: ಪ್ರಣವ್

ವಾಷಿಂಗ್ಟನ್ (ಪಿಟಿಐ):ದೇಶದಲ್ಲಿ ಆರ್ಥಿಕ ಪ್ರಗತಿಗೆ ಯಾವುದೇ ಹಿನ್ನಡೆ ಉಂಟಾಗಿಲ್ಲ. ಯಾವುದೇ ನೀತಿಗಳು ದುರ್ಬಲವಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.2014ರ ಲೋಕಸಭೆ ಚುನಾವಣೆ ತನಕ ದೇಶದಲ್ಲಿ ಯಾವುದೇ ಮಹತ್ತರ ಆರ್ಥಿಕ ಸುಧಾರಣೆಗಳು ನಡೆಯುವುದಿಲ್ಲ ಎಂದು ಇತ್ತೀಚೆಗೆ ಹಿರಿಯ ಆರ್ಥಿಕ ಸಲಹೆಗಾರ  ಕೌಶಿಕ್ ಬಸು ಹೇಳಿದ್ದರು. ಇದನ್ನು ಅಲ್ಲಗಳೆದಿರುವ ಪ್ರಣವ್, ಮೂಲಸೌಕರ್ಯ ನಿಧಿ, ತಯಾರಿಕಾ ನೀತಿ ಸೇರಿದಂತೆ ಹಲವು ಆರ್ಥಿಕ ಉತ್ತೇಜನ ಕ್ರಮಗಳನ್ನು ಇತ್ತೀಚೆಗಷ್ಟೇ ಕೈಗೊಳ್ಳಲಾಗಿದೆ. ಯಾವುದೇ ನೀತಿಗಳು ಶಕ್ತಿಹೀನವಾಗಿಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.