ಶೀಘ್ರ ರಾಜಮನೆತನಕ್ಕೆ ಹೊಸ ಕುಡಿ

ಶನಿವಾರ, ಜೂಲೈ 20, 2019
23 °C

ಶೀಘ್ರ ರಾಜಮನೆತನಕ್ಕೆ ಹೊಸ ಕುಡಿ

Published:
Updated:

 ಲಂಡನ್ (ಪಿಟಿಐ): ಬ್ರಿಟನ್ ರಾಜಮನೆತನಕ್ಕೆ ಹೊಸ ಕುಡಿಯ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕುತೂಹಲಕ್ಕೆ ವಾರಾಂತ್ಯದಲ್ಲಿ ತೆರೆ ಬೀಳಲಿದೆ ಎಂದು ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲಾ ತಿಳಿಸಿದ್ದಾರೆ.`ಯುವರಾಜ ವಿಲಿಯಂ ಮತ್ತು ಕೇಟ್ ದಂಪತಿಗೆ ಈ ವಾರದ ಅಂತ್ಯದಲ್ಲಿ ಮಗ ಅಥವಾ ಮಗಳು ಜನಿಸಬಹುದು. ನಾವೆಲ್ಲರೂ ಆ ಸಂಭ್ರಮದ ಕ್ಷಣಕ್ಕಾಗಿ ಕಾತರರಾಗಿದ್ದೇವೆ' ಎಂದು ಕ್ಯಾಮಿಲಾ ಹೇಳಿದ್ದಾರೆ.ರಾಜಕುಮಾರ ಚಾರ್ಲ್ಸ್ ಮತ್ತು ಕ್ಯಾಮಿಲಾ ದಂಪತಿ ಮಂಗಳವಾರವೇ ತಮ್ಮ ವಾರ್ಷಿಕ ರಜಾ ದಿನಗಳನ್ನು ಕಳೆಯಲು ಪ್ರಸಿದ್ಧ ಪ್ರವಾಸಿ ತಾಣ ಬ್ಯೂಡ್‌ಗೆ ತೆರಳಿದ್ದಾರೆ. ಆದರೆ, ದೂರವಾಣಿ ಮೂಲಕ ಪ್ರತಿ ಕ್ಷಣದ ಬೆಳವಣಿಗೆಯನ್ನು ಅಲ್ಲಿಂದಲೇ ತಿಳಿದುಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry