ಶೀಘ್ರ ರಾಷ್ಟ್ರಪತಿ ಆಸ್ತಿ ಬಹಿರಂಗ

ಶುಕ್ರವಾರ, ಜೂಲೈ 19, 2019
28 °C

ಶೀಘ್ರ ರಾಷ್ಟ್ರಪತಿ ಆಸ್ತಿ ಬಹಿರಂಗ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಶೀಘ್ರವೇ ತಮ್ಮ ಆಸ್ತಿಮೌಲ್ಯ ಘೋಷಿಸಲಿದ್ದು,  ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ. ರಾಷ್ಟ್ರಪತಿಯಾದವರು ಆಸ್ತಿ ಬಹಿರಂಗಪಡಿಸುತ್ತಿರುವುದು ರಾಷ್ಟ್ರದಲ್ಲಿ ಇದೇ ಮೊದಲು.ಪ್ರಸ್ತುತ ರಾಷ್ಟ್ರಪತಿಯವರ ಆಸ್ತಿ ಘೋಷಣೆ ಕಡ್ಡಾಯಗೊಳಿಸುವ ಕಾನೂನು ನಮ್ಮಲ್ಲಿ ಇಲ್ಲ. ಕೇಂದ್ರ ಮಾಹಿತಿ ಆಯುಕ್ತರು ಕೂಡ, ರಾಷ್ಟ್ರಪತಿಯವರಿಗೆ ಆಸ್ತಿ ಘೋಷಿಸಲು ನಿರ್ದೇಶಿಸುವ ಅಧಿಕಾರ ತಮಗಿಲ್ಲ ಎಂದು ಶುಕ್ರವಾರವಷ್ಟೇ ಹೇಳಿದ್ದರು.ರಾಷ್ಟ್ರಪತಿಯಾದವರು ತಮ್ಮ ಆಸ್ತಿಪಾಸ್ತಿ ಘೋಷಿಸಬೇಕೋ, ಬೇಡವೋ ಎಂಬುದು ಸ್ವತಃ ಅವರ ವಿವೇಚನೆಗೇ ಬಿಟ್ಟದ್ದು ಎಂದು ಆಯುಕ್ತ ಶೈಲೇಶ್ ಗಾಂಧಿ ಸ್ಪಷ್ಟಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry