ಶೀಘ್ರ ಸ್ಫೋಟಕ ಪತ್ತೆ ಸಾಧನ

7

ಶೀಘ್ರ ಸ್ಫೋಟಕ ಪತ್ತೆ ಸಾಧನ

Published:
Updated:

ಮೆಲ್ಬರ್ನ್(ಪಿಟಿಐ): ಸ್ಫೋಟಕ ಪತ್ತೆ ಹಚ್ಚುವ ನಾಯಿಗಳಿಗಿಂತ 100 ಪಟ್ಟು ಹೆಚ್ಚು ಆಘ್ರಾಣ ಶಕ್ತಿ ಇರುವ ಲೇಸರ್ ಸಾಧನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಹೊಸ ಸಾಧನವನ್ನು ಆವಿಷ್ಕಾರ ಮಾಡುವಲ್ಲಿ ಯಶಸ್ವಿಯಾಗಿದೆ.`ಸ್ಫೋಟಕಗಳನ್ನು ಪತ್ತೆ ಹಚ್ಚುವ ಬೇರೆಲ್ಲ ಸಾಧನಗಳಿಗಿಂತ ಈ ಲೇಸರ್ ಸಾಧನ (ಸ್ಮಾರ್ಟ್) ನೂರು ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ' ಎಂದು ಸಂಶೋಧಕರ ತಂಡದ ಸಹ ಪ್ರಾಧ್ಯಾಪಕ ಚಾರ್ಲ್ಸ್ ಹರ್ಬ್ ತಿಳಿಸಿದ್ದಾರೆ.ಕ್ಷಣ ಮಾತ್ರದಲ್ಲಿ ಸ್ಫೋಟಕಗಳನ್ನು ಪತ್ತೆ ಹಚ್ಚುವ ಈ ಸಾಧನವನ್ನು ಬಳಸಿ ಪ್ರಯಾಣಿಕರ ಚೀಲ, ಸೂಟ್‌ಕೇಸ್, ಸೇರಿದಂತೆ ವಿಮಾನ ನಿಲ್ದಾಣಗಳಲ್ಲಿ ಓಡಾಡುವವರ ಪೂರ್ತಿ ದೇಹದ ತಪಾಸಣೆಯನ್ನು ಸುಲಭವಾಗಿ ಮಾಡಬಹುದಾಗಿದೆ.ಭದ್ರತಾ ಸಿಬ್ಬಂದಿಗಳನ್ನು ಎಚ್ಚರಿಸುವ ಕೆಲಸವನ್ನು ಈ ಸಾಧನ ಅತಿ ಶೀಘ್ರವಾಗಿ ಮಾಡುತ್ತದೆ. ಪೊಲೀಸರಿಗೆ ಸಹಾಯವಾಗುವಂತೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿಯೂ ಈ ಸಾಧನ ಉಪಯುಕ್ತವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry