ಭಾನುವಾರ, ಮೇ 31, 2020
27 °C

ಶೀಘ್ರ 371ನೇ ಕಲಂ ತಿದ್ದುಪಡಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್:  ಸಂವಿಧಾನ 371ನೇ ಕಲಂ ಶೀಘ್ರ ತಿದ್ದುಪಡಿ ಆಗದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕನ್ನಡ ಸೇನೆ ರಾಜ್ಯ ಸಂಚಾಲಕ ರವಿಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸೇನೆ ತಾಲ್ಲೂಕು ಘಟಕ ವತಿಯಿಂದ ಸೋಮವಾರ ನಡೆದ ರ್ಯಾಲಿ ಉದ್ದೇಶಿಸಿ ಮಾತನಾಡಿದರು.ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಸಂವಿಧಾನ ಕಲಂ 371ನೇ ತಿದ್ದುಪಡಿ ಒಂದೇ ಮಾರ್ಗ. ಈ ಭಾಗದ ಜನತೆಯ ಮನವಿಗೆ ಸ್ಪಂದಿಸಿ, ಕೂಡಲೇ ಆದೇಶ ಹೊರಡಿಸಬೇಕು. ಈ ಸಂಬಂಧ ಇದೇ 19ಕ್ಕೆ ಬೆಂಗಳೂರಿನಲ್ಲಿ ಧರಣಿ ನಡೆಸಲಾಗುತ್ತಿದೆ ಎಂದು ರವಿಸ್ವಾಮಿ ತಿಳಿಸಿದರು. ಪ್ರಧಾನಮಂತ್ರಿ ಅವರ ಹೆಸರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ ಎಸ್.ಎನ್.ವಾರಿ ಅವರಿಗೆ ಸಲ್ಲಿಸಿದರು.ಜಿಲ್ಲಾ ಕಾರ್ಯದರ್ಶಿ ರೇವಣಯ್ಯಸ್ವಾಮಿ, ತಾಲ್ಲೂಕು ಅಧ್ಯಕ್ಷ ಬಾಲಾಜಿ ಪಾಟೀಲ, ಪ್ರಮುಖರಾದ ಉಸ್ಮಾನ ಗುತ್ತೆದಾರ, ನಿಂಗಪ್ಪ ವಾರಿ, ಶಾಂತಕುಮಾರ, ರೇವಣಸಿದ್ದ, ನೀಲಕಂಠ ಪಾಟೀಲ, ಆನಂದರೆಡ್ಡಿ, ಸಂಜು ಬಿಜಾಪೂರೆ, ನಾರಾಯಣ ವಾಲಿ, ಮಸ್ತಾನ್ ಪಟೇಲ, ಬಿ.ಎಸ್.ಸ್ವಾಮಿ, ತಾಹೇರ್ ಬಾಗವಾನ, ಮಹೇಶ ಧುಮ್ಮನಸೂರ, ಸಂದೀಪ ಪಾಟೀಲ, ಸಿದ್ದು ಅಕ್ಕಂಪೇಟೆ, ಮಲ್ಲಯ್ಯಸ್ವಾಮಿ, ಡೇವಿಡ, ಬಸವಾರೆಡ್ಡಿ ಚೀನಕೇರಿ, ತಾಜೋದ್ದೀನ್, ಅತೀಖ ಜಮಾದಾರ, ಕರಬಸಯ್ಯಾ, ಅಂಬರೀಶ, ಬಾಬು ಯರಬಾಗ, ಜಡ್ಸ್‌ನ್ ಒಂಟಿ, ಗಂಗಾಧರ ಉಡಬಾಳ, ಜನಾರ್ಧನ ಸಾವರರ್ಗೆಕರ್, ಬಸವಾರೆಡ್ಡಿ ಇಟಗಾ ಅಲ್ಲದೇ ಜಿಲ್ಲೆಯ ಭಾಲ್ಕಿ ಇನ್ನೂ ವಿವಿಧ ತಾಲ್ಲೂಕು ಘಟಕ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.ಇದಕ್ಕೂ ಮುನ್ನ ಪಟ್ಟಣದ ಶಿವಾಜಿ ವೃತ್ತದಿಂದ ಅಂಬೇಡ್ಕರ ವೃತ್ತದ ಮೂಲಕ ಶಾಸಕರ ನಿವಾಸ ಎದುರಿನಿಂದ ಮಿನಿ ವಿಧಾನಸೌಧ ವರೆಗೆ ರ್ಯಾಲಿ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.