ಶೀತಲೀಕರಣ ಜಾಲ ಕೇಂದ್ರಕ್ಕೆ ಒಪ್ಪಿಗೆ

7

ಶೀತಲೀಕರಣ ಜಾಲ ಕೇಂದ್ರಕ್ಕೆ ಒಪ್ಪಿಗೆ

Published:
Updated:

ನವದೆಹಲಿ (ಪಿಟಿಐ): ಸರ್ಕಾರ ಗುರುವಾರ ರಾಷ್ಟ್ರೀಯ ಶೀತಲೀಕರಣ ಘಟಕಗಳ (ಜಾಲ) ಅಭಿವೃದ್ಧಿ ಕೇಂದ್ರ(ಎನ್‌ಸಿಸಿಡಿ) ಸ್ಥಾಪಿಸಲು ಒಪ್ಪಿಗೆ ನೀಡಿದ್ದು, ಇದರ ಸಂಗ್ರಹಣಾ ನಿಧಿಗೆ ಏಕಕಾಲದ ಅನುದಾನವಾಗಿ 25 ಕೋಟಿ ರೂಪಾಯಿ ಒದಗಿಸಿದೆ.ದೇಶದಲ್ಲಿ ಸಮರ್ಪಕ ಸಂಗ್ರಹಣಾ ಸೌಲಭ್ಯಗಳಿಲ್ಲದೆ ವಾರ್ಷಿಕ 50 ಸಾವಿರ ಕೋಟಿ ರೂಪಾಯಿ ಮೌಲ್ಯ ದ ಕೊಯ್ಲೋತ್ತರ ನಷ್ಟ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.

ಈ ಶೀತಲೀಕರಣ ಜಾಲ ಅಭಿವೃದ್ಧಿ ಕೇಂದ್ರವನ್ನು ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ 22 ಸದಸ್ಯರ ಆಡಳಿತ ಮಂಡಳಿ ಮುನ್ನಡೆಸಲ್ದ್ದಿದಾರೆ. ಇದರಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry