ಶೀಲಾಳ ಜವಾನಿಗೆ ಮುನ್ನಿ ಬದನಾಮ್...

7

ಶೀಲಾಳ ಜವಾನಿಗೆ ಮುನ್ನಿ ಬದನಾಮ್...

Published:
Updated:

ಬೀದರ್: ‘ಮೈ ನೇಮ್ ಇಜ್ ಶೀಲಾ... ಶೀಲಾ ಕಿ ಜವಾನಿ...’ ಎಂಬ ಹಾಡಿಗೆ ಶಿಫಾಲಿ ಜರಿವಾಲಾ ಕುಣಿಯುತ್ತಿದ್ದರೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಶಾಸಕರು, ಗಣ್ಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.‘ಕಾಂಟಾ ಲಗಾ’ ಖ್ಯಾತಿಯ ಶಿಫಾಲಿಯ ಕುಣಿತ ಕೇವಲ ‘ಶೀಲಾಳ ಜವಾನಿ’ಗೆ ಸೀಮಿತವಾಗಿರಲಿಲ್ಲ. ಅರ್ಥಾತ್ ಮುನ್ನಿಯ ಬದನಾಮ್ ಬಗೆಗಿನ ಹಾಡಿಗೂ ಕುಣಿದಳು. ವೇದಿಕೆಯ ಮುಂಭಾಗದಲ್ಲಿದ್ದ ಶಾಸಕ ರಹೀಮ್‌ಖಾನ್, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮತ್ತಿತರರು ನರ್ತಿಸಿದರು.‘ದಬಂಗ್’ ಚಿತ್ರದ ಮುನ್ನಿ ಬದನಾಮ್ ಹೋಗಯಿ ಡಾರ್ಲಿಂಗ್ ತೆರೆ ಲಿಯೆ..., ‘ತೀಸ ಮಾರ ಖಾನ್’ ಚಿತ್ರದ ಮೈ ನೇಮ್ ಈಸ್ ಶೀಲಾ... ಶೀಲಾ ಕಿ ಜವಾನಿ... ಹಾಗೂ ‘ಕಾಂಟಾ ಲಗಾ’... ಹಾಡುಗಳಿಗೆ ಅದ್ಭುತ ಡ್ಯಾನ್ಸ್ ಪ್ರದರ್ಶಿಸಿ ನೆರೆದವರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.ಬೀದರ್ ಉತ್ಸವದ ಮುಖ್ಯ ವೇದಿಯಲ್ಲಿ ಶುಕ್ರವಾರ ಸಂಜೆ ನಡೆದ ಶಿಫಾಲಿಯ ಡ್ಯಾನ್ಸ್ ಕಾರ್ಯಕ್ರಮ ಕೋಟೆ ಆವರಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ಮನೋರಂಜನೆಯ ರಸದೌತಣ ನೀಡಿತು. ಮೂರು ಹಾಡುಗಳ ರಿಮಿಕ್ಸ್‌ಗೆ ಹೆಜ್ಜೆ ಹಾಕಿ ಶಿಫಾಲಿ ಗಮನ ಸೆಳೆದರು. ನಾಲ್ಕೈದು ಹಾಡುಗಳ ಮೇಲೆ ಡ್ಯಾನ್ಸ್ ಮಾಡಿದ ಶಿಫಾಲಿ ಪ್ರೇಕ್ಷಕರಲ್ಲಿ ಉತ್ಸಾಹದ ಅಲೆ ಎಬ್ಬಿಸಿತು. ಅದು ಎಲ್ಲರೂ ಕುಣಿಯುದಕ್ಕೆ ಕಾರಣವಾಯಿತು.ವರ್ಣರಂಜಿತ ವೇದಿಕೆಯಲ್ಲಿ ಶಿಫಾಲಿ ಕುಣಿಯುತ್ತಿದ್ದರೆ ಯುವಕರು ಸೇರಿದಂತೆ ನೂರಾರು ಜನ ಶಿಳ್ಳೆ ಹೊಡೆದು, ಮೈ ಮರೆತು ಕುಣಿದರು. ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ ಆಕರ್ಷಕ ಆಗಿದ್ದರಿಂದ ಡ್ಯಾನ್ಸ್ ಸೊಗಸಾಗಿ ಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry