ಗುರುವಾರ , ಆಗಸ್ಟ್ 22, 2019
27 °C

ಶುಕ್ರವಾರ, 2-8-1963

Published:
Updated:

ಸಮುದಾಯ ಯೋಜನೆ    ಪ್ರಗತಿ ಕುಂಠಿತ

ನವದೆಹಲಿ, ಆ. 1 - ಗ್ರಾಮಾಂತರ ಪ್ರದೇಶಗಳಲ್ಲಿ ಸ್ತ್ರೀ ಪುರುಷರನ್ನು ಉತ್ತಮಪಡಿಸಲು ಉದ್ದೇಶಿಸಿದ ಸಮುದಾಯ ಅಭಿವೃದ್ಧಿ ಆಂದೋಲನ ಕುಂಠಿತವಾಗುತ್ತಿರುವುದು ವಿಷಾದಕರವೆಂದು ಪ್ರಧಾನ ಮಂತ್ರಿ ನೆಹರೂ ಇಂದು ಇಲ್ಲಿ ತಿಳಿಸಿದರು.`ಕಾರ್ಯವಿಧಾನಗಳು, ಚರ್ಚೆಗಳು, ಶಾಸ್ತ್ರಾರ್ಥಗಳು ಇವುಗಳಲ್ಲಿ ಕಾಲಹರಣ ಮಾಡುತ್ತ ನಾವು ಏನು ಮಾಡಬೇಕೊ ಅದನ್ನು ಮಾಡುತ್ತಿಲ್ಲ' ಎಂದು ಅವರು ಟೀಕಿಸಿದರು.ನಗರದಲ್ಲಿ ಸಂಚಾರಿ ರೇಡಿಯೊ ಪೊಲೀಸ್ ತಂಡದ ಕಾರ್ಯಾರಂಭ

ಬೆಂಗಳೂರು, ಆ. 1 - ನಗರದ ಪೊಲೀಸ್ ವ್ಯವಸ್ಥೆಯ ಪುನರ್ ವಿಂಗಡನೆಯ ನಾಂದಿಯಾಗಿ `ಸಂಚಾರಿ ರೇಡಿಯೋ ಪೊಲೀಸ್ ತಂಡ' ಇಂದು ಕೆಲಸ ಆರಂಭಿಸಿತು.ಇನ್ಫೆಂಟ್ರಿ ರಸ್ತೆಯಲ್ಲಿನ ಪೊಲೀಸ್ ಕಮೀಷನರ್ ಕಚೇರಿಯ ಬಳಿ ನಡೆದ ಸರಳ ಸಮಾರಂಭದಲ್ಲಿ ಕಮೀಷನರ್   ಶ್ರೀ ಸಿ. ಚಾಂಡಿ ಅವರು ಈ ತಂಡದ ಕಾರ್ಯಚಟುವಟಿಕೆಯನ್ನು ಉದ್ಘಾಟಿಸಿದರು.

Post Comments (+)