ಗುರುವಾರ , ಜೂನ್ 24, 2021
22 °C

ಶುಕ್ರವಾರ, 23-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಕ್ರವಾರ, 23-3-1962

ಖೋತಾ ಬಜೆಟ್; ತೆರಿಗೆಗಳ ಮುನ್ಸೂಚನೆ

ಬೆಂಗಳೂರು, ಮಾ, 22- ಹೊಸ ತೆರಿಗೆಯನ್ನು ವಿಧಿಸದಿದ್ದರೂ, ಅವು ಮುಂದೆ ಬರುವ ಬಗ್ಗೆ ಸ್ಪಷ್ಟ ಮುನ್ಸೂಚನೆಯೊಡನೆ, 322.63 ಲಕ್ಷ ರೂಪಾಯಿ ಖೋತಾ ಇರುವ ರಾಜ್ಯದ 62-63ನೇ ಸಾಲಿನ ಬಜೆಟ್ಟನ್ನು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಇಂದು ವಿಧಾನ ಸಭೆಯಲ್ಲಿ ಮಂಡಿಸಿದರು.ಅರ್ಥ ಸಚಿವರೂ ಆದ ಮುಖ್ಯಮಂತ್ರಿಗಳು ಬರುವ ವರ್ಷದಲ್ಲಿ 9970.86 ಲಕ್ಷ ರೂಪಾಯಿ ಆದಾಯ ಹಾಗೂ 10293.49 ಲಕ್ಷ ರೂಪಾಯಿ ವ್ಯಯವನ್ನು ಅಂದಾಜು ಮಾಡಿದ್ದಾರೆ.`ಕಾವೇರಿ ಯೋಜನೆ ಅಗತ್ಯದ ಬಗ್ಗೆ ಭಿನ್ನಾಭಿಪ್ರಾಯವಿಲ್ಲ~

ಬೆಂಗಳೂರು, ಮಾ. 22 - ಬೆಂಗಳೂರು ನಗರದ ಕುಡಿಯುವ ನೀರಿನ ಅಭಾವದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕಾದರೆ ಕಾವೇರಿ ಯೋಜನೆಯನ್ನೇ ಕೈಗೊಳ್ಳಬೇಕೆಂಬ ವಿಚಾರದಲ್ಲಿ, ನಗರ ಕಾರ್ಪೊರೇಷನ್ನಿನ ಅಭಿಪ್ರಾಯಕ್ಕೂ ಮತ್ತು ತಮ್ಮ ವೈಯಕ್ತಿಕ ಅಭಿಪ್ರಾಯಕ್ಕೂ ವ್ಯತ್ಯಾಸವಿಲ್ಲವೆಂದು ಮುಖ್ಯಮಂತ್ರಿ ಶ್ರೀ ಕಂಠಿಯವರು ಇಂದು ಇಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.