ಶುಕ್ರವಾರ, 24-8-1962

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಶುಕ್ರವಾರ, 24-8-1962

Published:
Updated:

`ಭಾರತ ಕಮ್ಯುನಿಸ್ಟ್ ರಾಷ್ಟ್ರವಾದರೆ ಹಾನಿ~

ವಾಷಿಂಗ್ಟನ್, ಆ. 23 - ಭಾರತವೇನಾದರೂ ಕಮ್ಯುನಿಸ್ಟ್ ರಾಷ್ಟ್ರವಾಗಿ ಮಾರ್ಪಟ್ಟರೆ ವಿಶ್ವದ ಇಡೀ ಹಿಂದುಳಿದ ರಾಷ್ಟ್ರಗಳಲ್ಲಿ ಶಾಂತಿಧ್ಯೇಯಕ್ಕೆ ತೀವ್ರ ಧಕ್ಕೆಯುಂಟಾಗುವುದೆಂದು ಅಮೆರಿಕದ ಅಧ್ಯಕ್ಷ ಕೆನೆಡಿ ನಿನ್ನೆ ಘೋಷಿಸಿದರು.ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಭಾರತಕ್ಕೆ ಅಮೆರಿಕ ನೆರವು ನೀಡಿಕೆ ಕ್ರಮವನ್ನು ಸಮರ್ಥಿಸುತ್ತಾ ಹೀಗೆ ಹೇಳಿದರು. ಅಮೆರಿಕದಿಂದ ನೆರವು ಪಡೆಯುವ ರಾಷ್ಟ್ರವೊಂದು ಕಮ್ಯುನಿಸ್ಟ್ ರಾಷ್ಟ್ರವೊಂದರ ಜತೆ ಮಿಲಿಟರಿ ಅಥವಾ ಆರ್ಥಿಕ ವ್ಯವಹಾರ ನಡೆಸುವ ನೈತಿಕ ಹಕ್ಕು ಹೊಂದಿದೆಯೆ ಎಂದು ಪ್ರಶ್ನಿಸಿದಾಗ ಅವರು ಹೀಗೆ ಹೇಳಿದರು.ನಾಯಿ ಮುಟ್ಟಿದ ಮಂಚ

ಭೋಪಾಲ್, ಆ. 23 - ಮಧ್ಯಪ್ರದೇಶದ ಉತ್ತರ ಭಾಗದಲ್ಲಿರುವ ಮಹಾಜನ ಪಂಗಡದ ಜನ ತಮ್ಮ ಹಾಸಿಗೆಯ ಮೇಲೆ ಮೊದಲು ನಾಯಿ ಮಲಗದ ಹೊರತು ತಾವು ಎಂದೂ ಮಲಗುವುದಿಲ್ಲ.ತಮ್ಮ ಹಾಸಿಗೆಗಳ ಮೇಲೆ ಮೊದಲು ನಾಯಿ ಮಲಗಿದರೆ ಅನಂತರ ಅದರಲ್ಲಿ ಮಲಗುವ ಸ್ತ್ರೀ-ಪುರುಷರಿಗೆ ನಾಯಿಯ ಕಲ್ಯಾಣ ಗುಣಗಳು ಅಂದರೆ ಗಂಡಸರಿಗೆ ಚಚ್ಚರ, ಜಾಗರೂಕತೆ ಹಾಗೂ ಹೆಂಗಸರಲ್ಲಿ ನಿಷ್ಠೆ ಬರುವುದೆಂಬ ನಂಬಿಕೆ ಆ ಜನರಿಗಿದೆ. ಅಲ್ಲದೆ ಶಬ್ದಕೋಶ ರಚನೆ ತಂಡವೊಂದು ನಡೆಸಿದ ಸಮೀಕ್ಷೆಯೊಂದರಲ್ಲಿ ಈ ಅಪೂರ‌್ವ ಪದ್ಧತಿ ಬೆಳಕಿಗೆ ಬಂದಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry