ಶುಕ್ರವಾರ, ನವೆಂಬರ್ 22, 2019
23 °C

ಶುಕ್ರವಾರ, 26-4-1963

Published:
Updated:

ಕಾಶ್ಮೀರ: ಮಾತುಕತೆಗೆ ನಿರ್ಧಾರ

ಕರಾಚಿ, ಏ. 25 -
ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತ ಭಾರತ ಮತ್ತು ಪಾಕಿಸ್ತಾನ ಸಚಿವ ಮಟ್ಟದ 6ನೇ ಸುತ್ತಿನ ಮಾತುಕತೆ ಮೇ 15 ರಂದು ನವದೆಹಲಿಯಲ್ಲಿ ನಡೆಯುತ್ತದೆ.ನಿಜಲಿಂಗಪ್ಪನವರಿಗೆ ತುಲಾಭಾರ

ಬೆಳಗಾವಿ, ಏ. 25 -
ರಕ್ಷಣಾ ನಿಧಿಗೆ ಹಣ ಕೂಡಿಸಲು ಮೈಸೂರಿನ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರನ್ನು ಇಂದು ಬೆಳಿಗ್ಗೆ ಇಲ್ಲಿನ ಲಿಂಗರಾಜ ಕಾಲೇಜ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಐದು ರೂಪಾಯಿ ನೋಟುಗಳಿಂದ ತೂಕ ಮಾಡಲಾಯಿತು. ಇದರಿಂದ ರಕ್ಷಣಾ ನಿಧಿಗೆ ಐದೂವರೆ ಲಕ್ಷ ರೂಪಾಯಿ ಬಂದಹಾಗಾಯ್ತು.ಗುಮಾಸ್ತರಿಂದ ಹಿಂದಿ ಬೆಳೆಯದು 

ಅಲಹಾಬಾದ್, ಏ. 25
- `ಹಿಂದಿ ಮತ್ತು ಇಂಗ್ಲಿಷ್ ಬಗ್ಗೆ ವಿವಾದ ಪ್ರಶ್ನೆಯೇ ಇಲ್ಲ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಆ ಭಾಷೆ ಆಡಳಿತ ಭಾಷೆಯಾಗಬಲ್ಲದು. ಬಂಗಾಳ, ತಮಿಳುನಾಡು ಮತ್ತು ನಾಡಿನ ಇತರ ಭಾಗದ ಜನತೆಯನ್ನೊಳಗೊಂಡ ಕೇಂದ್ರದಲ್ಲಿ ಮಟ್ಟಿಗೆ ಹಿಂದಿಯನ್ನು ಹೇರಲಾಗದು' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)