ಶುಕ್ರವಾರ, 28-10-1961
ಹೆಚ್ಚು ತಾಂತ್ರಿಕ ನೆರವು, ಖಾಸಗಿ ಬಂಡವಾಳ
ನವದೆಹಲಿ, ಅ. 27- ಅಮೆರಿಕದ ಹಿರಿಯ ಕೈಗಾರಿಕೋದ್ಯಮಗಳು ನಿನ್ನೆ ಪ್ರಧಾನಿ ನೆಹರೂ ಅವರೊಡನೆ 90 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಅಲ್ಲಿಗೆ ಈ ಕೈಗಾರಿಕೋದ್ಯಮಿಗಳು ಭಾರತಕ್ಕೆ ಯಾವ ಉದ್ದೇಶದಿಂದ ಬಂದಿದ್ದರೋ ಆ ಕಾರ್ಯ ಮುಗಿದಂತಾಯಿತು.
ಈ ಮಾತುಕತೆಯಿಂದ ಅಮೆರಿಕದ ವಾಣಿಜ್ಯೋದ್ಯಮಿಗಳಿಗೆ `ಬಹು ಸಂತೋಷ~ ವಾಯಿತೆಂದೂ ಮಾತುಕತೆ ನಡೆದಾಗಿನ ವಾತಾವರಣ ಸೊಗಸಾಗಿತ್ತೆಂದು ಈ ಕೈಗಾರಿಕೋದ್ಯಮಿಗಳ ವಕ್ತಾರರು ತಿಳಿಸಿದರು.
ಘಟಪ್ರಭಾದಿಂದ 53000 ಎಕರೆಗೆ ನೀರು
ನವದೆಹಲಿ, ಅ. 27- ನಿರ್ಮಾಣ ವಾಗುತ್ತಿರುವ ಘಟಪ್ರಭಾ ಅಣೆಕಟ್ಟು ಯೋಜನೆಯಿಂದ ದ್ವಿತೀಯ ಯೋಜನೆಯ ಅಂತ್ಯದ ವೇಳೆಗೆ ಮೈಸೂರಿನ 53000 ಎಕರೆ ಜಮೀನಿಗೆ ನೀರೊದಗಿಸಲಾಯಿತೆಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಘಟಪ್ರಭಾ ಕಣಿವೆ ಪ್ರದೇಶದ ಅಭಿವೃದ್ಧಿ ಗುರಿಯುಳ್ಳ ಈ ಯೋಜನೆ ಮೊದಲ ಹಂತದ ಕಾರ್ಯ 44 ಮೈಲಿ ಉದ್ದದ ಎಡಭಾಗದ ನಾಲೆ ನಿರ್ಮಾಣವನ್ನೊಳಗೊಂಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.