ಶುಕ್ರವಾರ, ನವೆಂಬರ್ 22, 2019
25 °C

ಶುಕ್ರವಾರ, 5-4-1963

Published:
Updated:

ಮೈಸೂರು ವಾದ ಆಶ್ಚರ್ಯಕರ ಎಂದು ಮುಂಬೈ ವಕ್ತಾರ

ಮುಂಬೈ, ಏ. 4
- ಕೃಷ್ಣ ನದಿ ನೀರನ್ನು ಪಶ್ಚಿಮಕ್ಕೆ ಅಡ್ಡತಿರುಗಿಸಬೇಕೆಂಬ ಬೇಡಿಕೆಯನ್ನು ಮಹಾರಾಷ್ಟ್ರ ರಾಜ್ಯವು ಬಿಟ್ಟುಕೊಟ್ಟರೆ ತಮ್ಮ ರಾಜ್ಯಕ್ಕೆ ವಿದ್ಯುಚ್ಛಿಕ್ತಿಯನ್ನು ಸರಬರಾಜು ಮಾಡಲು ಸಿದ್ಧವಾಗಿರುವುದಾಗಿ ಮೈಸೂರು ರಾಜ್ಯದ ಹೇಳಿಕೆಯು ಆಶ್ಚರ್ಯಕರವಾಗಿದೆಯೆಂದು ಮಹಾರಾಷ್ಟ್ರ ಸರ್ಕಾರದ ವಕ್ತಾರರೊಬ್ಬರು ಇಂದು ಪತ್ರಕರ್ತರಿಗೆ ತಿಳಿಸಿದರು.ರಾಜ್ಯಕ್ಕೆ ಕರ್ನಾಟಕ ನಾಮಕರಣ ಮುಂದಕ್ಕೆ

ಬೆಂಗಳೂರು, ಏ. 4
- ಇಂದು ವಿಧಾನಸಭೆ ಸಭಾನಾಯಕರಾದ ಶ್ರೀ ಎಸ್. ನಿಜಲಿಂಗಪ್ಪನವರು ಮಂಡಿಸಿದ ಸೂಚನೆಯನ್ನು ಅಂಗೀಕರಿಸಿ ರಾಜ್ಯದ ಹೆಸರನ್ನು `ಕರ್ನಾಟಕ' ಎಂದು ಬದಲಾಯಿಸಬೇಕೆಂಬ ಖಾಸಗಿ ನಿರ್ಣಯದ ಚರ್ಚೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹಾಕಲು ತೀರ್ಮಾನಿಸಿತು.

ತುರ್ತು ಪರಿಸ್ಥಿತಿಯಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿರುವ ವಿಷಯವನ್ನು ಚರ್ಚಿಸುವುದು ಸಾಧುವಾಗಿರುವುದಿಲ್ಲವೆಂದು ಮುಖ್ಯಮಂತ್ರಿಗಳು ಸಭೆಗೆ ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)