ಭಾನುವಾರ, ನವೆಂಬರ್ 17, 2019
29 °C

ಶುಕ್ರವಾರ, 5-7-1963

Published:
Updated:

ಶ್ರೀನಗರ - ಲೆಹ್ ರಸ್ತೆ ಸುಧಾರಣೆಗೆ ಅಮೆರಿಕದ ನೆರವು

ಲೆಹ್, ಜುಲೈ 4 -
ಶ್ರೀನಗರ ಲೆಹ್ ರಸ್ತೆಯನ್ನು ಉತ್ತಮಪಡಿಸಲು ಅಮೆರಿಕದ ಮಿಲಿಟರಿ ನೆರವಿನ ಕಾರ್ಯಕ್ರಮದಂತೆ ಯಂತ್ರ ಸಾಮಗ್ರಿಗಳನ್ನು ಒದಗಿಸಲು ತಮ್ಮ ಸರ್ಕಾರವು ಒಪ್ಪಿಕೊಂಡಿರುವುದಾಗಿ ಅಮೆರಿಕದ ರಾಯಭಾರಿ ಪ್ರೊ. ಜೆ. ಕೆ. ಗಾಲ್‌ಬ್ರೇತ್ ಇಂದು ಇಲ್ಲಿ ಪ್ರಕಟಿಸಿದರು.ಈ ರಸ್ತೆಯನ್ನು ಈಗ ವರ್ಷದಲ್ಲಿ ಸ್ವಲ್ಪ ಕಾಲ ಮಾತ್ರ ಬಳಸಬಹುದಾಗಿದ್ದು ಈ ಅವಧಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನೆರವನ್ನು ನೀಡಲಾಗುವುದು.ಶ್ರೀ ಚಾಂಡಿ ಅವರಿಂದ ನಗರದ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕಾರ

ಬೆಂಗಳೂರು, ಜುಲೈ 4
- ಇಂದು ಸಂಜೆ ಶ್ರೀ ಸಿ. ಚಾಂಡಿ ಅವರು ಬೆಂಗಳೂರು ನಗರದ ಪ್ರಪ್ರಥಮ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಾಗ ನಗರದ ಪೊಲೀಸ್ ದಳದ ಪುನರ್ ವ್ಯವಸ್ಥೆ ವಿಧಿವತ್ತಾಗಿ ಆರಂಭವಾಯಿತು.ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಐ. ಜಿ. ಪಿ. ಶ್ರೀ ಎಸ್. ಎನ್. ಹೊಸಾಳಿ ಅವರು ಪೊಲೀಸ್ ಕಮಿಷನರ್ ಅವರ ಕಚೇರಿಯನ್ನು ಉದ್ಘಾಟಿಸಿ ಹೊಸ ಅಧ್ಯಾಯವನ್ನು ಆರಂಭಿಸಿದರು.ಅಕ್ಟೋಬರ್‌ನಲ್ಲಿ ಕಾರ್ಯನಿರತ ಪತ್ರಕರ್ತರ ಫೆಡರೇಷನ್ ಸಮಾವೇಶ

ಮದರಾಸು, ಜುಲೈ 4 -
ಭಾರತ ಕಾರ್ಯನಿರತ ಪತ್ರಿಕೋದ್ಯೋಗಿಗಳ ಫೆಡರೇಷನ್ನಿನ 11ನೇ ವಾರ್ಷಿಕಾಧಿವೇಶನವು ಅಕ್ಟೋಬರ್ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ಸಮಾವೇಶಗೊಳ್ಳಲಿದೆ.ಈಗ ಪತ್ರಿಕೋದ್ಯೋಗಿಗಳು ಎದುರಿಸುತ್ತಿರುವ ವೃತ್ತಿ ಹಾಗೂ ಆರ್ಥಿಕ ಸಮಸ್ಯೆಗಳು ಸಮಾವೇಶದಲ್ಲಿ ಚರ್ಚೆಗೆ ಬರಲಿವೆ.

ಚೀಣಕ್ಕೆ ಅಕ್ಷಯ್ ಚಿನ್ ಪ್ರದೇಶ ನೀಡಿಕೆ ವರದಿಯ ನಿರಾಕರಣೆ

ನವದೆಹಲಿ, ಜುಲೈ 4 -
ಗಡಿ ತೊಂದರೆಯನ್ನು ಬಗೆಹರಿಸುವ ಅಂಗವಾಗಿ ಇತರ ಕಡೆಗಳಲ್ಲಿ ಕೆಲವು ರಿಯಾಯಿತಿಯನ್ನು ಪಡೆದು ಅಕ್ಷಯ್ ಚಿನ್ ಪ್ರದೇಶವನ್ನು ಶಾಶ್ವತವಾಗಿ ಚೀಣಾಕ್ಕೆ ಒಪ್ಪಿಸುವ ಸಲಹೆಯೊಂದು ಭಾರತ ಸಕಾರದಲ್ಲಿ ಉನ್ನತ ಮಟ್ಟದಲ್ಲಿ ಪರಿಶೀಲಿತವಾಗುತ್ತಿದೆಯೆಂಬ `ವಿಮೋರ್ ಸನ್' ಪತ್ರಿಕೆಯ ನವದೆಹಲಿ ಸುದ್ದಿಗಾರರ ವರದಿಯನ್ನು `ಪೂರ್ಣವಾಗಿ ಅಸತ್ಯವಾದುದು, ಕೀಟಲೆಯದು ಹಾಗೂ ಆಧಾರರಹಿತವಾದುದೆಂದು' ವಿದೇಶಾಂಗ ವ್ಯವಹಾರ ಸಚಿವ ಶಾಖೆ ವಕ್ತಾರರೊಬ್ಬರು ಇಲ್ಲಿ ಇಂದು ಹೇಳಿದರು.

-

ಪ್ರತಿಕ್ರಿಯಿಸಿ (+)