ಶುಕ್ರವಾರ, 6-7-1962

ಭಾನುವಾರ, ಜೂಲೈ 21, 2019
26 °C

ಶುಕ್ರವಾರ, 6-7-1962

Published:
Updated:

ಶಾಸಕರ ಸಂಬಳ  150 ರಿಂದ 200 ರೂ.

ಬೆಂಗಳೂರು, ಜುಲೈ 5
- ಪ್ರಸಕ್ತ ಅಧಿವೇಶನದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಭೆ ಶಾಸಕರ ಸಂಬಳವನ್ನು 150 ರೂಪಾಯಿಗಳಿಂದ 200 ರೂಪಾಯಿಗಳಿಗೆ ಏರಿಸುವ ಪ್ರಶ್ನೆಯನ್ನು ಚರ್ಚಿಸಲಿದೆ.ಸದ್ಯದಲ್ಲಿ ಶಾಸಕರಿಗೆ ತಿಂಗಳಿಗೆ 150 ರೂಪಾಯಿ ಸಂಬಳ ಮತ್ತು 100 ರೂಪಾಯಿ ವಿಶೇಷ ಭತ್ಯ ದೊರಕುತ್ತದೆ.ನಗರಕ್ಕೆ ನೀರು: ರಕ್ಷಣಾ ಇಲಾಖೆ ನೆರವು?

ಬೆಂಗಳೂರು, ಜುಲೈ 5 -
ರಕ್ಷಣಾ ಮಂತ್ರಿ ಶ್ರೀ ವಿ. ಕೆ. ಕೃಷ್ಣಮೆನನ್‌ರವರು ಇಂದು ಇಲ್ಲಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರೊಡನೆ ನಡೆಸಿದ ಸಂಭಾಷಣೆ ಫಲವಾಗಿ ನಗರಕ್ಕೆ ಕಾವೇರಿ ನೀರು ತರುವ ಯೋಜನೆಗೆ ರಕ್ಷಣಾ ಇಲಾಖೆ ನೆರವು ದೊರಕುವ ಸಂಭವ ಉಂಟಾಗಿದೆಯೆಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry