ಶನಿವಾರ, ಮೇ 28, 2022
27 °C

ಶುಕ್ರ ಸಂಕ್ರಮ ವೀಕ್ಷಿಸಲು ಜನರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನಗರದಲ್ಲಿ ಬಿಸಿಲಿನ ಪ್ರಮಾಣ ಕಡಿಮೆ ಆಗಿಲ್ಲ. ಬೆಳಿಗ್ಗೆ ಏಳು ಗಂಟೆಗೆ ಸೂರ್ಯ ಉರಿಯಲು ಆರಂಭಿಸಿದ್ದರೂ ಬುಧವಾರ ಪರಿಸ್ಥಿತಿ ಭಿನ್ನವಾಗಿತ್ತು. ಬಾನಂಗಳದಲ್ಲಿ ಸೂರ್ಯನತ್ತ ದೃಷ್ಟಿ ಇಡಲು ಜನರು ಕುತೂಹಲ ತೋರುತ್ತಿದ್ದರು.ಉದಗೀರ್ ರಸ್ತೆಗೆ ಸಂಪರ್ಕ ಕಲ್ಪಿಸುವ ಆರ್.ಟಿ.ಒ.- ಕೆ.ಇ.ಬಿ. ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ವಿಶೇಷವಾದ ಕನ್ನಡಕವನ್ನು ಧರಿಸಿ ಸೂರ್ಯನತ್ತ ದೃಷ್ಟಿ ಹರಿಸಲು ಆರಂಭಿಸಿದ್ದರು.ಅಪರೂಪವಾದ 121 ವರ್ಷಕ್ಕೆ ಒಮ್ಮೆ ಸಂಭವಿಸಲಿದೆ ಎನ್ನಲಾದ ಶುಕ್ರ ಗ್ರಹದ ಸಂಕ್ರಮ ಇವರನ್ನು ಸೆಳೆದಿತ್ತು. ಸೂರ್ಯನನ್ನು ಶುಕ್ರ ಗ್ರಹವು ಹಾದು ಹೋಗುವ ಪ್ರಕ್ರಿಯೆ ವಿಶೇಷ ಕನ್ನಡದ ಮೂಲಕ ವೀಕ್ಷಿಸಿದಾಗ ಸೂರ್ಯನ ಮೇಲೆ ಚುಕ್ಕಿ ಆಕಾರದಲ್ಲಿ ಕಂಡು ಬರುತ್ತಿತ್ತು, ನೋಡುಗರ ಕುತೂಹಲವನ್ನು ಇಮ್ಮಡಿಸುತ್ತಿತ್ತು.ಜಿಲ್ಲೆಯ ಭಾರತ ಜ್ಞಾನ ವಿಜ್ಞಾನ ಸಮಿತಿ ಶುಕ್ರ ಸಂಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದುದು ವಿಶೇಷವಾಗಿತ್ತು.ಶಿಕ್ಷಕ ಮತ್ತು ವಿಜ್ಞಾನ ಸಮಿತಿ ಸದಸ್ಯರಾದ ಎಂ.ಎಸ್.ಮನೋಹರ್ ಅವರು, `ಶುಕ್ರ ಸಂಕ್ರಮ, ಗ್ರಹಣ ವೀಕ್ಷಣೆಗೆ ಜನತೆ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ.ಇದು, ಜನರಲ್ಲಿ ಮೂಢನಂಬಿಕೆ ಕಡಿಮೆ ಆಗುತ್ತಿರುವುದನ್ನು ತೋರಿಸಲಿದೆ~ ಎಂದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಜಿಲ್ಲಾ ವಿಜ್ಞಾನ ಕೇಂದ್ರವು ಜಂಟಿಯಾಗಿ ಇದನ್ನು ಆಯೋಜಿಸಿದ್ದು, ಸಮಿತಿ ವಿವಿಧ ಸದಸ್ಯರು ವಿವರಣೆಯನ್ನು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.