ಶುದ್ಧಗೊಂಡ ನೀರಿನ ಟ್ಯಾಂಕ್‌

7

ಶುದ್ಧಗೊಂಡ ನೀರಿನ ಟ್ಯಾಂಕ್‌

Published:
Updated:

ನೆಲಮಂಗಲ: ಪಟ್ಟಣದ ಸುಭಾಷನಗರಕ್ಕೆ ನೀರು ಪೂರೈಸುವ ಓವರ್‌ಹೆಡ್ ಟ್ಯಾಂಕನ್ನು ಶುದ್ಧೀಕರಿಸಿ ಹಕ್ಕಿ ಪಕ್ಷಿಗಳು ಹೋಗದಂತೆ ಮೆಸ್ ಅಳವಡಿಸಿ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಆರ್.ಮಂಜುನಾಥ್ ತಿಳಿಸಿದ್ದಾರೆ.‘ನಲ್ಲಿಗಳಲ್ಲಿ ಕಲುಷಿತ ನೀರು’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ಪುರಸಭೆಯ ಎಂಜಿನಿಯರ್‌ ರವಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಓವರ್‌­ಹೆಡ್ ಟ್ಯಾಂಕ್‌ನಲ್ಲಿದ್ದ ನೀರನ್ನು ತೆರವುಗೊಳಿಸಿ ಔಷಧಿ ಸಿಂಪಡಿಸಿ ಸ್ವಚ್ಛಮಾ­ಡಿಸಿ­ದರು.ಬಳಿಕ ಮೆಸ್ ಅಳವಡಿಸಿದರು,  ಟ್ಯಾಂಕ್‌ನಲ್ಲಿದ್ದ ಹಕ್ಕಿಯೊಂದು ಗೂಡು ಕಟ್ಟಿ­ಕೊಂಡು ಒಂದೆರೆಡು ಪುಕ್ಕಗಳು ಉದುರಿದ್ದರಿಂದ ಜನ ಆತಂಕ­ಗೊಂಡಿದ್ದರು. ಶುದ್ಧ ನೀರು ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊ­ಳ್ಳಲಾಗಿದೆ. ಭಯ­ಪಡುವ ಅವಶ್ಯಕತೆ ಇಲ್ಲ,  ಎಂದು ಪುರಸಭೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry