ಶುದ್ಧ ಕನ್ನಡ ಬರವಣಿಗೆ ಕಣ್ಮರೆ

7

ಶುದ್ಧ ಕನ್ನಡ ಬರವಣಿಗೆ ಕಣ್ಮರೆ

Published:
Updated:

ಕನ್ನಡ ನಾಡು-ನುಡಿಯ ಅಭಿವೃದ್ಧಿ, ಉಳಿವು ಸಾಹಿತ್ಯ ಸಮ್ಮೇಳನ ನಡೆಸುವ ಪ್ರಮುಖ ಉದ್ದೇಶ. ಆದರೆ ಮಡಿಕೇರಿ­ಯಲ್ಲಿ ನಡೆಯುತ್ತಿರುವ ೮೦ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯನ್ನು ನೋಡಿದಾಗ ನನಗೆ ಆಘಾತ­ವಾಯಿತು. ಅಲ್ಲಿ ದೊಡ್ಡ, ದಪ್ಪ ಅಕ್ಷರಗಳಲ್ಲಿ ‘ಭಾರತೀಸುತ ವೇದಿಕೆ’ ಎಂದು ಬರೆಯುವ ಬದಲಾಗಿ ‘ಭಾರತಿಸುತ ವೇದಿಕೆ’ ಎಂದು ಬರೆಯಲಾಗಿತ್ತು.ಗೋಡೆ ಬರಹಗಳಲ್ಲಿ, ಹೋಟೆಲ್‌ನ ನಾಮ­ಫಲಕಗಳಲ್ಲಿ, ಅಂಗಡಿ­ಗಳ ಬೋರ್ಡ್‌­ಗಳಲ್ಲಿ ತಪ್ಪು ತಪ್ಪಾಗಿ ಕನ್ನಡ ಅಕ್ಷರ­ಗಳನ್ನು ಬರೆದಿರು­ವುದನ್ನು ನಾವು ನೋಡುತ್ತೇವೆ. ಇದನ್ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲೂ ಕಂಡಾಗ ಮುಂದೆ ಶುದ್ಧ ಕನ್ನಡ ಬರವಣಿಗೆ ಎಂಬುದು ಮರೀಚಿಕೆ­ಯಾಗ­ಬಹು­ದೇನೋ ಅನಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry