ಶುಭಾರಂಭದ ನಿರೀಕ್ಷೆಯಲ್ಲಿ ದೋನಿ

7
ಇಂದು ಸಿಎಸ್‌ಕೆ-ಟೈಟಾನ್ಸ್‌ ಮುಖಾಮುಖಿ

ಶುಭಾರಂಭದ ನಿರೀಕ್ಷೆಯಲ್ಲಿ ದೋನಿ

Published:
Updated:

ರಾಂಚಿ (ಪಿಟಿಐ):  ಐಪಿಎಲ್‌ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದ ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದವರು ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಲು ಕಾತರವಾಗಿದ್ದಾರೆ.ಸೂಪರ್‌ ಕಿಂಗ್ಸ್‌ ತಂಡದವರು ಜಾರ್ಖಂಡ್‌ ರಾಜ್ಯ  ಕ್ರಿಕೆಟ್‌ ಸಂಸ್ಥೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ಟೈಟಾನ್ಸ್‌ ತಂಡವನ್ನು ಎದುರಿಸಲಿದ್ದಾರೆ.  ದೋನಿ ತವರೂರಿನಲ್ಲಿಯೇ ಈ ಪಂದ್ಯ ನಡೆಯುತ್ತಿರುವುದರಿಂದ ಮತ್ತಷ್ಟು ಆಸಕ್ತಿ ಕೆರಳಿಸಿದೆ.ಎರಡು ಬಾರಿ ಐಪಿಎಲ್‌ ಚಾಂಪಿಯನ್‌ ಆಗಿರುವ ಸೂಪರ್‌ ಕಿಂಗ್ಸ್‌ ಬಲಿಷ್ಠ ತಂಡ. ದೋನಿ, ಸುರೇಶ್‌ ರೈನಾ, ಮುರಳಿ ವಿಜಯ್‌, ಮೈಕಲ್‌ ಹಸ್ಸಿ ಅವರಂಥ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಈ ತಂಡ ಒಳಗೊಂಡಿದೆ. ಹಾಗೇ, ರವೀಂದ್ರ ಜಡೇಜ ಅವರಂಥ ಪ್ರತಿಭಾವಂತ ಆಲ್‌ರೌಂಡರ್‌ಗಳಿದ್ದಾರೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry