ಶುಭಾಶಯ ರವಾನೆಗೆ `ಡೊಕೊಮೊ ಪೋಸ್ಟ್'

7

ಶುಭಾಶಯ ರವಾನೆಗೆ `ಡೊಕೊಮೊ ಪೋಸ್ಟ್'

Published:
Updated:

ಬೆಂಗಳೂರು: ಕ್ರಿಸ್‌ಮಸ್, ಹೊಸ ವರ್ಷ, ಸಂಕ್ರಾಂತಿ ಮತ್ತು ಯುಗಾದಿ ಹಬ್ಬಗಳ ಸಂದರ್ಭ ಬಂಧು-ಮಿತ್ರರಿಗೆ ಮೊಬೈಲ್ ಫೋನ್ ಮೂಲಕ ಭಿನ್ನ ರೀತಿಯಲ್ಲಿ ಶುಭಾಶಯ ಕೋರಲು `ಡೊಕೊಮೊ ಪೋಸ್ಟ್' ಎಂಬ ಗ್ರೀಟಿಂಗ್ ಅಪ್ಲಿಕೇಷನ್ ಅನ್ನು `ಟಾಟಾ ಟೆಲಿಸರ್ವಿಸಸ್' ಅಭಿವೃದ್ಧಿಪಡಿಸಿದೆ.ಗ್ರಾಹಕರ ಅಗತ್ಯ, ವಿವಿಧ ಸಂದರ್ಭಗಳಿಗೆ ಹೊಂದಿಕೊಳ್ಳುವಂತಹ ಅಪ್ಲಿಕೇಷನ್ ಪರಿಚಯಿಸಿದ್ದೇವೆ. ಗ್ರಾಹಕರು ತಮ್ಮದೇ ಧ್ವನಿಯಲ್ಲಿ ಶುಭಾಶಯ ಸಂದೇಶ ದಾಖಲಿಸಿ ಪ್ರೀತಿಪಾತ್ರರಿಗೆ ರವಾನಿಸಲು ಈ ಅಪ್ಲಿಕೇಷನ್‌ನಲ್ಲಿ ಅವಕಾಶವಿದೆ ಎಂದು `ಟಾಟಾ ಡೊಕೊಮೊ' ಸಂಸ್ಥೆ `ವಿಎಎಸ್' ವಿಭಾಗದ ಮುಖ್ಯಸ್ಥ ರಿಷಿಮೋಹನ್ ಮಲ್ಹೋತ್ರ ಸುದ್ದಿಗಾರರಿಗೆ ತಿಳಿಸಿದರು.ಆಂಡ್ರಾಯ್ಡ, ಬ್ಲ್ಯಾಕ್‌ಬೆರ‌್ರಿ ಮತ್ತು ಜೆ2ಎಂಇ ಆಪರೇಟಿಂಗ್ ಸಿಸ್ಟಂ ಮೊಬೈಲ್‌ಗಳಿಗೆ `ಡೊಕೊಮೊ ಪೋಸ್ಟ್' ಸೂಕ್ತವಾಗಿದೆ. ಕಂಪೆನಿಯ ವೆಬ್‌ಸೈಟ್‌ನಿಂದ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ಕೊಳ್ಳಬಹುದು. ವೀಡಿಯೊ ಗ್ರೀಟಿಂಗ್, ರೂ. 5ಕ್ಕೆ ಕ್ಕೇ 100 ಮಂದಿಗೆ ಶುಭಾಶಯ, ಮಿತಿಯಿಲ್ಲದಷ್ಟು ಸಂದೇಶ ರವಾನೆಗೆ ಇದರಲ್ಲಿ ಅವಕಾಶವಿದೆ ಎಂದು ಅವರ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry