ಶುಭ್ ಸೇವಾ ಕೇಂದ್ರ ಆರಂಭ Ver 5

7

ಶುಭ್ ಸೇವಾ ಕೇಂದ್ರ ಆರಂಭ Ver 5

Published:
Updated:

ಚಿನ್ನಾಭರಣ ತಯಾರಿಕಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್, ಚಿನ್ನಾಭರಣ  ವ್ಯಾಪಾರವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲು ಬೆಂಗಳೂರಿನಲ್ಲಿ ‘ಶುಭ್ ಸರ್ವಿಸ್ ಸೆಂಟರ್’ (ಸೇವಾ ಕೇಂದ್ರ) ಆರಂಭಿಸಿದೆ.

ಚಿನ್ನಾಭರಣ ಖರೀದಿ- ಪರೀಕ್ಷೆ, ಹಳೆ ಚಿನ್ನದ ಆಭರಣಗಳ ಮಾರಾಟ, ವಿನಿಮಯ, ಆಭರಣಗಳ ದುರಸ್ತಿ ಹೀಗೆ ಚಿನ್ನದ ವಹಿವಾಟಿನ ಎಲ್ಲ ಸಂದರ್ಭಗಳಲ್ಲಿ ಅಸಮರ್ಪಕ ವಿಧಾನಗಳಿಗೆ ಮತ್ತು ಎಲ್ಲ ಬಗೆಯ ಅನಿಶ್ಚಿತತೆಗಳಿಗೆ ಈ ಸೇವಾ ಕೇಂದ್ರ ತೆರೆ ಎಳೆಯಲಿದೆ. ಗ್ರಾಹಕರ ಸಮ್ಮುಖದಲ್ಲಿಯೇ ಆಭರಣಗಳ ಮೌಲ್ಯಮಾಪನ, ಪರೀಕ್ಷೆ ನಡೆಸಲು ಈ ಸೇವಾ ಕೇಂದ್ರ ನೆರವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಸಗಟು ವ್ಯಾಪಾರದಲ್ಲಿ ಬಳಕೆಯಾಗುವ ಚಿನ್ನದ ಶುದ್ಧತೆ ಪರಿಕಲ್ಪನೆಯನ್ನು ಈಗ  ಚಿಲ್ಲರೆ ವಹಿವಾಟಿಗೂ ಪರಿಚಯಿಸಲಾಗಿದೆ.  ಇದು ಅಂದಾಜು 90  ಲಕ್ಷ ವೆಚ್ಚದಲ್ಲಿ ಈ ಸೇವಾ ಕೇಂದ್ರದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದೆ.

‘ಇಂಡೆಕ್ಷನ್ ಫರ್ನಸ್’ನಲ್ಲಿ ಗ್ರಾಹಕರು ಸ್ವತಃ ತಾವೇ ತಮ್ಮ ಚಿನ್ನಾಭರಣ ಹಾಕಿ ಕರಗಿಸಬಹುದು. ಈ ಎಲ್ಲ ಪ್ರಕ್ರಿಯೆಯ ವಿಡಿಯೊ ದಾಖಲೆಯೂ ಇರುತ್ತದೆ. ಗ್ರಾಹಕರು ಬೇರೆಡೆ ಖರೀದಿಸಿದ ಆಭರಣಗಳ ಶುದ್ಧತೆಯನ್ನೂ ಇಲ್ಲಿ ಪರೀಕ್ಷಿಸಬಹುದು ಎಂದು ಮೆಹ್ತಾ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry