ಶುಲ್ಕ ಏರಿಕೆ: ಎಸ್‌ಎಫ್‌ಐ ಪ್ರತಿಭಟನೆ

7

ಶುಲ್ಕ ಏರಿಕೆ: ಎಸ್‌ಎಫ್‌ಐ ಪ್ರತಿಭಟನೆ

Published:
Updated:

ಬೆಂಗಳೂರು: ಪದವಿಪೂರ್ವ ಕಾಲೇಜು­ಗಳ ಬೋಧನಾ ಶುಲ್ಕ ಏರಿಸಿ ರಾಜ್ಯ ಸರ್ಕಾರ ಹೊರಡಿಸಿ­ರುವ ಆದೇಶವನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಸಂಘಟನೆಯ (ಎಸ್‌ಎಫ್‌ಐ) ಸದಸ್ಯರು ನಗರದ ಪುರಭವನದ ಎದುರು ಸರ್ಕಾರದ ಪ್ರತಿಕೃತಿ ದಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎನ್‌.ಅನಂತ ನಾಯ್ಕ, ‘ಸರ್ಕಾರ ಪದವಿಪೂರ್ವ ಕಾಲೇಜುಗಳ ಶುಲ್ಕ­ದಲ್ಲಿ ಶೇ 20ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಪ್ರವೇಶ ಶುಲ್ಕ, ಗ್ರಂಥಾಲಯ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಎಲ್ಲ ಶುಲ್ಕಗಳನ್ನು ಶೇ 20ರಷ್ಟು ಹೆಚ್ಚಿಸಲು ಆದೇಶಿಸ­ಲಾಗಿದೆ. ಇದರಿಂದ ವಿದ್ಯಾರ್ಥಿ­ಗಳಿಗೆ ತೀವ್ರ ತೊಂದರೆಯಾಗಲಿದೆ. ಇತರ ರಾಜ್ಯಗಳಲ್ಲಿ ಪದವಿಹಂತದ ತನಕ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌­ಟ್ಯಾಪ್‌, ಬಸ್ ಪಾಸ್‌ ನೀಡಲಾಗು­ತ್ತಿದೆ’ ಎಂದರು.ಶ್ರುತಿ ನೆಲಮಾಕನಹಳ್ಳಿ, ಚಿಕ್ಕ­ರಾಜು, ಯುವರಾಜ, ಹನುಮಂತ ದುರ್ಗದ, ವೆಂಕಟೇಶ್‌, ಶ್ರೀನಿವಾಸ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry