ಮಂಗಳವಾರ, ಏಪ್ರಿಲ್ 13, 2021
28 °C

ಶುಲ್ಕ ಮರುಪಾವತಿ ಯೋಜನೆ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: 2012-13 ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮರುಪಾವತಿ ಸಂಬಂಧಿಸಿದಂತೆ ಪರಿಷ್ಕೃತ ಸರ್ಕಾರಿ ಆದೇಶ ಹೊರಡಿಸ ಲಾಗಿದೆ.   ಶುಲ್ಕ ಮರುಪಾವತಿಗೆ ಅರ್ಹತೆ: ವಿದ್ಯಾ ರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ-1, 2 ಎ , 3 ಎ ಮತ್ತು 3 ಬಿಗೆ ಸೇರಿದವರಾಗಿರಬೇಕು. (ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೊಳಪಡುವ ಮುಸ್ಲಿಂ, ಸಿಖ್, ಪಾರ್ಸಿ, ಕ್ರಿಶ್ಚಿಯನ್, ಆಂಗ್ಲೋ, ಇಂಡಿಯನ್, ಜೈನ್, ಬುದ್ದಿಸ್ಟ್ ಈ ವಿದ್ಯಾರ್ಥಿಗಳು ಆ ಇಲಾಖೆಯಿಂದ ಸೌಲಭ್ಯವನ್ನು ಪಡೆದುಕೊಳ್ಳ ಬಹುದು), ವಿದ್ಯಾರ್ಥಿ ತಂದೆ, ತಾಯಿ, ಪೋಷಕರ ವಾರ್ಷಿಕ ವರಮಾನ  ಪ್ರವರ್ಗ-1 ಕ್ಕೆ ರೂ. 1,00,000 ರ ಒಳಗೆ ಇರತಕ್ಕದ್ದು,   ಪ್ರವರ್ಗ -2 ಎ, 3 ಎ ಮತ್ತು 3 ಬಿಕ್ಕೆ ರೂ. 44,500 ಒಳಗೆ ಇರತಕ್ಕದ್ದು.  ಭಾರತದ ಪ್ರಜೆ ಯಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಟ 7 ವರ್ಷ ಕರ್ನಾಟಕ ದಲ್ಲಿ ವ್ಯಾಸಂಗ ಮಾಡಿರಬೇಕು.  ಸರ್ಕಾರಿ, ಸ್ಥಳೀಯ ಸಂಸ್ಥೆ, ಅನುದಾನಿತ ಸಂಸ್ಥೆಗಳು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಅರ್ಹರಿರುತ್ತಾರೆ.   ವಿದ್ಯಾರ್ಥಿಗಳು ಹಿಂದಿನ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗ ದಿದ್ದಲ್ಲಿ ಮುಂದಿನ ವರ್ಷದಲ್ಲಿ ಶುಲ್ಕ ಮರುಪಾವತಿಗೆ ಅರ್ಹರಾಗುವುದಿಲ್ಲ.  ಮುಂದಿನ ವರ್ಷದಲ್ಲಿ ಹಿಂದಿನ ಬಾಕಿ ವಿಷಯಗಳೂ ಸೇರಿದಂತೆ ಆ ವರ್ಷದ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗ ದಿದ್ದಲ್ಲಿ ಮಾತ್ರ ನಂತರದ ವರ್ಷದಲ್ಲಿ ಶುಲ್ಕ ಮರುಪಾವತಿಗೆ ಅರ್ಹರಾಗಿರು ತ್ತಾರೆ.  ಆದರೆ ಆ ಕೋರ್ಸುಗಳಲ್ಲಿ ಕ್ಯಾರಿ ಓವರ್ ಪದ್ಧತಿ ಜಾರಿ ಇದ್ದು, ಮುಂದಿನ ತರಗತಿ ಪ್ರವೇಶಕ್ಕೆ ಅವಕಾಶ ವಿದ್ದಲ್ಲಿ ಅಂತಹವರು ಶುಲ್ಕ ಮರು ಪಾವತಿಗೆ ಅರ್ಹರಿರುತ್ತಾರೆ.ಶುಲ್ಕ ವಿನಾಯಿತಿ ಬಾಬ್ತನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದ ರಿಂದ ವಿದ್ಯಾರ್ಥಿಗಳು  ತಮ್ಮ ಹೆಸರಿ ನಲ್ಲಿ ರಾಷ್ಟ್ರೀಕತ ಬ್ಯಾಂಕ್ ಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬೇಕು.  ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು, ಬ್ಯಾಂಕಿನ ಶಾಖೆಯ ಹೆಸರು, ಬ್ಯಾಂಕಿನ ಕೋಡನ್ನು ತಮ್ಮ ಶಾಲೆ, ಕಾಲೇಜಿನ  ಪ್ರಾಂಶುಪಾಲರಿಗೆ ನಿಗದಿತ ಅರ್ಜಿ ನಮೂನೆಯೊಂದಿಗೆ ಸಲ್ಲಿಸ ತಕ್ಕದ್ದು.  ನಿಗದಿತ ಅರ್ಜಿ ನಮೂನೆ ಗಳನ್ನು ಶಾಲೆ, ಕಾಲೇಜುಗಳಲ್ಲಿ ಪಡೆಯ ಬಹುದು.  ಅರ್ಜಿ ಸಲ್ಲಿಸಬೇಕಾದ ಕೊನೆ ದಿನಾಂಕ ಆ ಕೋರ್ಸಿಗೆ ಪ್ರವೇಶ ನಿಗದಿ ಪಡಿಸಿದ ಕೊನೆ ದಿನಾಂಕದಿಂದ 15 ದಿನಗಳೊಳಗಾಗಿ ಇರುತ್ತದೆ.     ಮಾಹಿ ತಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯನ್ನು ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.