ಶುಲ್ಕ ಹಿಂಪಡೆಯಲು ಒಕ್ಕೂಟ ಒತ್ತಾಯ

7

ಶುಲ್ಕ ಹಿಂಪಡೆಯಲು ಒಕ್ಕೂಟ ಒತ್ತಾಯ

Published:
Updated:

ಗುಲ್ಬರ್ಗ: ಸರ್ಕಾರ ಒ.ಬಿ.ಸಿ ವರ್ಗಗಳಗೆ ಹೆಚ್ಚಿಸಿರುವ ಶುಲ್ಕ ಹಿಂಪಡೆಯಲು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎ.ಐ.ಎಸ್.ಎಫ್)ದ ಜಿಲ್ಲಾ ಸಂಚಾಲಕ ಅಲಿಸಾಬ ಎಂ.ಸಿಂದಗಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಪ್ರವರ್ಗ-2ಎ, 3ಎ, ಮತ್ತು 3ಬಿ ಗೆ ಸೇರಿದ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಿರುವ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನಿಗಧಿತ ಶುಲ್ಕ ಪಡೆಯಬಹುದು ಎಂಬ ಸರ್ಕಾರದ ಆದೇಶದಿಂದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರರಂಭದಲ್ಲಿ ಶುಲ್ಕ ಭರಿಸಲಾಗದೇ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ಇದೆ.ಈ ಕೂಡಲೇ ಹೊಸ ನೀತಿಯನ್ನು ಕೈಬಿಟ್ಟು ಮೊದಲಿನ ರೀತಿಯಲ್ಲಿ ಶುಲ್ಕ ರಿಯಾಯಿತಿ ಮುಂದುವರಿಸಬೇಕು ಎಂದು ಎ.ಐ.ಎಸ್.ಎಫ್ ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry