ಗುರುವಾರ , ಏಪ್ರಿಲ್ 15, 2021
24 °C

ಶುಶ್ರೂಷಕರ ಸೇವೆ ಮಹತ್ವದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ವೈದ್ಯರಿಗಿಂತ ಶುಶ್ರೂಷಕರ ಸೇವೆ ಬಹಳ ಪ್ರಮುಖವಾಗಿದೆ. ಶುಶ್ರೂಷಕರ ಹೃದಯ ಸ್ಪರ್ಶ ಹಾರೈಕೆ ರೋಗಿಗಳಿಗೆ ಅಮೃತ” ಎಂದು ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೊಕಾಟೆ ಹೇಳಿದರು.ಇಲ್ಲಿನ ಕೆಎಲ್‌ಇ ವಿಶ್ವವಿದ್ಯಾಲಯದ ನರ್ಸಿಂಗ್ ಮಹಾವಿದ್ಯಾಲಯದ ಬೆಳ್ಳಿ ಹಬ್ಬದ ಹಾಗೂ ಹಳೆ ವಿದ್ಯಾರ್ಥಿಗಳ ಮೇಳದ ಅಂಗವಾಗಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ 25 ವರ್ಷಗಳಲ್ಲಿ ನರ್ಸಿಂಗ್ ವಿದ್ಯಾಲಯ ಗಣನೀಯ ಸಾಧನೆ ಮಾಡಿದೆ. ಇಂತಹ ಅತ್ಯಮೂಲ್ಯವಾದ ಸೇವೆ ಹೆಚ್ಚಿನದಾಗಿ ನಡೆಯಲಿ. ಇಂತಹ ಸೇವೆಯ ವ್ಯಕ್ತಿಗಳನ್ನು 25 ವರ್ಷಗಳ ಕಾಲ ತಯಾರಿಸಿ ಪ್ರಪಂಚದಾದ್ಯಂತ ರೋಗಿಗಳ ಸೇವೆ ಸಲ್ಲಿಸಲು ಹರಡಿರುವುದು ಶ್ಲಾಘನೀಯ ಎಂದರು.ಡಾ. ಅಶೋಕ ಗೋಧಿ, ಪ್ರೊ. ಅಲ್ಕಾ ಕಾಳಂಬಿ, ಡಾ. ಆರ್.ಎಸ್.ಮುಧೋಳ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ. ವಿ.ಎಸ್.ಸಾಧುನವರ ಅಧ್ಯಕ್ಷತೆ ವಹಿಸಿದ್ದರು.  ಕೆಎಲ್‌ಇ ನರ್ಸಿಂಗ್ ಮಹಾವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಿದ್ದ ಹಿಂದಿನ ಪ್ರಾಚಾರ್ಯರಾದ ಸುರೇಶ ಸಾಲರ, ಉಷಾ ಜೋಶಿ, ಡಾ. ರಾಮಚಂದ್ರ ಹೊಲಿ ಹಾಗೂ ಡೆವಿಡ್ ಕೋಲಾ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯೆ ಪ್ರೊ. ಸುಧಾ ರೆಡ್ಡಿ ಸ್ವಾಗತಿಸಿದರು. ಪ್ರೊ. ಮಿಲ್ಕಾ ಮುದಾಳೆ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.