ಗುರುವಾರ , ಮೇ 13, 2021
16 °C

ಶುಶ್ರೂಷಕಿಯರಿಂದ ಇಬ್ಬರ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕಾಗಿ ಜಿಲ್ಲಾ ಆಸ್ಪತ್ರೆಯ ಶುಶ್ರೂಷಕಿ ಯೊಬ್ಬರು ಇಬ್ಬರ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ ಘಟನೆ ನಗರದ ಮುಸ್ಟೂರು ಲೇಔಟ್‌ನಲ್ಲಿ ಗುರುವಾರ ಸಂಜೆ ನಡೆದಿದೆ.ಜಿಲ್ಲಾ ಆಸ್ಪತ್ರೆಯ ಶುಶ್ರೂಷಕಿ ವಿಜಯಲಕ್ಷ್ಮಿ  ಎಂಬುವರು ಹಲ್ಲೆ ಮಾಡಿದವರು. ಮುಸ್ಟೂರು ಲೇಔಟ್ ನಿವಾಸಿಗಳಾದ ಎಚ್.ಎನ್.ರುದ್ರಪ್ಪ ಮತ್ತು ಎಚ್.ಆರ್.ನಾಗರಾಜ ಗಾಯಗೊಂಡವರು.ಕೆಎಸ್‌ಆರ್‌ಟಿಸಿ ಸಂಸ್ಥೆಯ ಬಸ್ ನಿರ್ವಾಹಕ ರುದ್ರಪ್ಪ ಮತ್ತು ಅವರ ಮಗ ನಾಗರಾಜ ಹಾಗೂ ವಿಜಯಲಕ್ಷ್ಮಿ ಅವರು ಮುಸ್ಟೂರು ಲೇಔಟ್‌ನ ಒಂದೇ ಕಟ್ಟಡದ ಎರಡು ಪ್ರತ್ಯೇಕ ಮನೆಗಳಲ್ಲಿ ವಾಸವಿದ್ದಾರೆ. ಮನೆಗೆ ನೀರು ಪೂರೈಸಿಕೊಳ್ಳಲು ಒಂದೇ ಸ್ವಿಚ್ಛ್ ಇರುವ ಕಾರಣ ಎರಡೂ ಮನೆಯವರ ನಡುವೆ ಜಗಳವಾಗುತಿತ್ತು.ಗುರುವಾರ ಸಂಜೆ ವಿಜಯಲಕ್ಷ್ಮಿ ಮತ್ತು ಅವರಿಬ್ಬರ ನಡುವೆ ಜಗಳವಾಗಿದೆ. ಸಿಟ್ಟಿಗೆದ್ದ ವಿಜಯಲಕ್ಷ್ಮಿ ಕಬ್ಬಿಣದ ಸಲಾಕೆ ತೆಗೆದುಕೊಂಡು ರುದ್ರಪ್ಪ ಮತ್ತು ನಾಗರಾಜ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಗಾಯಗೊಂಡಿರುವ ಇಬ್ಬರೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರುದ್ರಪ್ಪ, ನಾಗರಾಜ ಮತ್ತು ಅವರ ಕುಟುಂಬ ಸದಸ್ಯರು ತಮಗೆ ಕಿರುಕುಳ ನೀಡುತ್ತಿದ್ದರು. ಪದೇ ಪದೇ ಜಗಳವಾಡುತ್ತಿದ್ದರು ಎಂದು ಅವರ ವಿರುದ್ಧ ವಿಜಯಲಕ್ಷ್ಮಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಇಬ್ಬರೂ ಕಡೆಯವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.