ಸೋಮವಾರ, ಜೂನ್ 21, 2021
28 °C

ಶೂಟಿಂಗ್‌: ಹೀನಾ, ಚೈನ್‌ ಸಿಂಗ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಪರಿಣತ ಶೂಟರ್‌ಗಳಾದ ಹೀನಾ ಸಿಧು ಹಾಗೂ ಚೈನ್‌ ಸಿಂಗ್‌, ಕುವೈತ್‌ನಲ್ಲಿ ನಡೆಯುತ್ತಿರುವ 7ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ ಬಂಗಾರ ಜಯಿಸಿದ್ದಾರೆ.ಮಹಿಳೆಯರ ವಿಭಾಗದ ಏರ್‌ ಪಿಸ್ತೂಲ್‌  ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ 400ಕ್ಕೆ 386 ಸ್ಕೋರ್‌ ಗಳಿಸಿ  ಅಗ್ರ ಸ್ಥಾನ ಪಡೆದ ಹೀನಾ, ಅಂತಿಮ ಸುತ್ತಿನಲ್ಲಿ 200.3 ಸ್ಕೋರ್‌ ಗಳಿಸಿ  ಸ್ವರ್ಣ ತಮ್ಮದಾಗಿಸಿಕೊಂಡರು.ಪುರುಷರ ವಿಭಾಗದ ಏರ್‌ ರೈಫಲ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 619.6 ಸ್ಕೋರ್‌ ದಾಖಲಿಸಿದ ಚೈನ್‌ ಸಿಂಗ್‌ ಅಂತಿಮ ಸುತ್ತಿನಲ್ಲಿ 206 ಸ್ಕೋರ್‌ ಪಡೆದು ಚಿನ್ನ ಗೆದ್ದರು.ಮಹಿಳೆಯರ ತಂಡ ವಿಭಾಗದಲ್ಲಿ 1200ಕ್ಕೆ 1138 ಸ್ಕೋರ್‌ ಪಡೆದ ಭಾರತ ಬೆಳ್ಳಿಯ ಪದಕ ಪಡೆದರೆ, ಪುರುಷರ ವಿಭಾಗದಲ್ಲಿ ಚೈನ್‌ ಸಿಂಗ್‌ (619.6), ರವಿಕುಮಾರ್ (620.7) ಮತ್ತು ಪಿ.ಟಿ.ರಘುನಾಥ್‌ (615.8) ಸ್ಕೋರ್‌ ಗಳಿಸಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.