ಬುಧವಾರ, ಜೂನ್ 16, 2021
23 °C

ಶೂಟಿಂಗ್: ಗಗನ್ ಮಡಿಲಿಗೆ ಮತ್ತೊಂದು ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಶೂಟರ್ ಗಗನ್ ನಾರಂಗ್ ಕುವೈಟ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಗ್ರ್ಯಾನ್ ಪ್ರಿ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಬೆಳ್ಳಿ ಪದಕ ಗೆದ್ದುಕೊಂಡರು.ಇಲ್ಲಿಗೆ ಬಂದಿರುವ ಮಾಹಿತಿಗಳ ಪ್ರಕಾರ, ಈ ಮೊದಲು ಗಗನ್ 10ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ. ಈಗ ಈ ಸಾಧನೆ 50ಮೀ. ತ್ರಿ ರೈಫಲ್ ಪಿಸ್ತೂಲ್ ವಿಭಾಗದಲ್ಲಿ ಮೂಡಿ ಬಂದಿದೆ.ಶನಿವಾರ ನಡೆದ ಸ್ಪರ್ಧೆಯಲ್ಲಿ (ಪ್ರೋನ್ 395, ಸ್ಟ್ಯಾಂಡಿಂಗ್ 385 ಹಾಗೂ ನೀಲಿಂಗ್ 385) ಒಟ್ಟು 1165 ಪಾಯಿಂಟ್‌ಗಳನ್ನು ಪಂಜಾಬ್‌ನ ಈ ಶೂಟರ್ ಕಲೆ ಹಾಕಿದರು.ಇದರ ಜೊತೆಗೆ 3000 ಡಾಲರ್ ಬಹುಮಾನವನ್ನೂ ಪಡೆದರು. ಇಲ್ಲಿ ಗಗನ್ ಒಟ್ಟು 6000 ಡಾಲರ್ ತಮ್ಮದಾಗಿಸಿಕೊಂಡರು.2010ರ ನವದೆಹಲಿ ಕಾಮನ್‌ವೆಲ್ತ್ ಕೂಟ ಹಾಗೂ ಚೀನಾದ ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಕೂಟದಲ್ಲಿ ಈ ಶೂಟರ್ ಚಿನ್ನ ಜಯಿಸಿದ್ದರು.ಮುಂಬರುವ ಲಂಡನ್  ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ.ಭಾರತದ ಇನ್ನೊಬ್ಬ ಶೂಟರ್ ಸಂಜೀವ್ ರಜಪುತ್ 50ಮೀ. ರೈಫಲ್‌ನ ಪ್ರೋನ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇವರು ಒಟ್ಟು 1160 ಪಾಯಿಂಟ್ ಗಳಿಸಿದರು. ಪ್ರೋನ್‌ನಲ್ಲಿ 395, ಸ್ಟ್ಯಾಂಡಿಂಗ್‌ನಲ್ಲಿ 376 ಮತ್ತು ನೀಲಿಂಗ್‌ನಲ್ಲಿ 389 ಪಾಯಿಂಟ್ ಪಡೆದಿದ್ದರು. ಹಂಗೇರಿಯಾದ ಸಿಡಿ ಪೀಟರ್ 1171 ಪಾಯಿಂಟ್ ಗಳಿಸಿ ಚಿನ್ನ ತಮ್ಮದಾಗಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.