ಶೂಟಿಂಗ್: ನಾರಂಗ್, ರಜ್ಪೂತ್ಗೆ ನಿರಾಸೆ
ಲಂಡನ್ (ಪಿಟಿಐ): ಒಲಿಂಪಿಕ್ಸ್ ಶೂಟಿಂಗ್ನಲ್ಲಿ ಈ ಬಾರಿ ಎರಡು ಪದಕ ದೊರಕಿಸಿಕೊಟ್ಟಿರುವ ಭಾರತದ ಶೂಟರ್ಗಳ ಹೋರಾಟ ಅಂತ್ಯಗೊಂಡಿದೆ.ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್ನಲ್ಲಿ ಸೋಮವಾರ ನಡೆದ ಪುರುಷರ 50 ಮೀಟರ್ಸ್ ರೈಫಲ್ ತ್ರಿ ಪೊಜಿಷನ್ ವಿಭಾಗದಲ್ಲಿ ಗಗನ್ ನಾರಂಗ್ ಹಾಗೂ ಸಂಜೀವ್ ರಜ್ಪೂತ್ ಫೈನಲ್ಗೆ ಅರ್ಹತೆ ಗಿಟ್ಟಿಸಲು ವಿಫಲರಾದರು.
1,164 ಪಾಯಿಂಟ್ ಗಳಿಸಿದ ನಾರಂಗ್ 20ನೇ ಸ್ಥಾನ ಪಡೆದರು. `ಪ್ರೋನ್~ನಲ್ಲಿ 398, `ಸ್ಟ್ಯಾಂಡಿಂಗ್~ನಲ್ಲಿ 377 ಹಾಗೂ `ನೀಲಿಂಗ್~ನಲ್ಲಿ 389 ಪಾಯಿಂಟ್ ಕಲೆಹಾಕಿದರು. ರಜ್ಪೂತ್ 1,161 ಪಾಯಿಂಟ್ಗಳೊಂದಿಗೆ 26ನೇ ಸ್ಥಾನ ಗಳಿಸಿ ನಿರಾಸೆಗೆ ಕಾರಣರಾದರು.
1180 ಪಾಯಿಂಟ್ ಸಂಗ್ರಹಿಸಿದ ಇಟಲಿಯ ನಿಕೊಲೊ ಕ್ಯಾಂಪ್ರಿಯಾನಿ ಒಲಿಂಪಿಕ್ಸ್ ದಾಖಲೆ ನಿರ್ಮಿಸಿದರು.
25 ಮೀಟರ್ಸ್ ರ್ಯಾಪಿಡ್ ಫೈರ್ ಪಿಸ್ತೂಲ್ನಲ್ಲಿ ವಿಜಯ್ ಕುಮಾರ್ ಬೆಳ್ಳಿ ಹಾಗೂ 10 ಮೀಟರ್ ಏರ್ ರೈಫಲ್ ಶೂಟಿಂಗ್ನಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು. ಜೈದೀಪ್ ಕರ್ಮಾಕರ್ 50 ಮೀಟರ್ಸ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.