ಶೂಟಿಂಗ್: ಬಿಂದ್ರಾಗೆ ಬೆಳ್ಳಿ

7

ಶೂಟಿಂಗ್: ಬಿಂದ್ರಾಗೆ ಬೆಳ್ಳಿ

Published:
Updated:

ನವದೆಹಲಿ (ಪಿಟಿಐ): ಭಾರತದ ಅಭಿನವ್ ಬಿಂದ್ರಾ ಕುವೈಟ್ ಸಿಟಿಯಲ್ಲಿ ನಡೆಯುತ್ತಿರುವ ನಾಲ್ಕನೇ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದರು. ಸತ್ಯೇಂದ್ರ ಸಿಂಗ್ ಕಂಚಿನ ಪದಕ ಪಡೆದರು.ತಂಡ ವಿಭಾಗದ ಸ್ಪರ್ಧೆಯಲ್ಲಿ ಬಿಂದ್ರಾ, ಸತ್ಯೇಂದ್ರ ಮತ್ತು ಗಗನ್ ನಾರಂಗ್ ಅವರನ್ನೊಳಗೊಂಡ ಭಾರತವು ಬೆಳ್ಳಿ ಜಯಿಸಿತು. ಶೈಖ್ ಸಬಾ ಅಲ್ ಅಹ್ಮದ್ ಶೂಟಿಂಗ್ ರೇಂಜ್‌ನಲ್ಲಿ ಬುಧವಾರ ಬಿಂದ್ರಾ ಅರ್ಹತಾ ಹಂತದಲ್ಲಿ 594 ಪಾಯಿಂಟ್ ಕಲೆಹಾಕಿದರಲ್ಲದೆ, ಫೈನಲ್‌ನಲ್ಲಿ 103.6 ಪಾಯಿಂಟ್ ಗಿಟ್ಟಿಸಿದರು. ಸತ್ಯೇಂದ್ರ ಅರ್ಹತಾ ಹಂತದಲ್ಲಿ 593 ಹಾಗೂ ಫೈನಲ್‌ನಲ್ಲಿ 103.7 ಪಾಯಿಂಟ್ ಕಲೆಹಾಕಿದರು. ಗಗನ್ ನಾರಂಗ್ (592 ಹಾಗೂ 102.5) ಏಳನೇ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry