ಶನಿವಾರ, ಏಪ್ರಿಲ್ 17, 2021
23 °C

ಶೂದ್ರಕ್ಕೆ 38...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶೂದ್ರ’ ಸಾಹಿತ್ಯ ಪತ್ರಿಕೆಗೆ ಈಗ 38ರ ಸಂಭ್ರಮ. ಈ ಸಂದರ್ಭದಲ್ಲಿ ಭಾನುವಾರ ವೈವಿಧ್ಯಮಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ.ಬೆಳಿಗ್ಗೆ 10.30ಕ್ಕೆ ಸಾಹಿತಿ ಯು. ಆರ್. ಅನಂತಮೂರ್ತಿ ಅವರಿಂದ ರವೀಂದ್ರನಾಥ್ ಟ್ಯಾಗೋರ್ ಅವರ ಭಾವಚಿತ್ರ ಅನಾವರಣ, ಪ್ರೊ. ಟಿ. ಯಲ್ಲಪ್ಪ ಮತ್ತು ಎಲ್. ಎನ್. ಮುಕುಂದರಾಜ್ ಅವರಿಗೆ ಜಿ.ಎಸ್. ಶಿವರುದ್ರಪ್ಪ ಗೌರವ ಕಾವ್ಯಸ್ಪರ್ಧೆಯ ಪ್ರಶಸ್ತಿ ಪ್ರದಾನ. ಹಿರಿಯ ವಿಮರ್ಶಕ ಪ್ರೊ. ಸಿ.ಎನ್. ರಾಮಚಂದ್ರನ್ ಅವರಿಂದ ‘ನನ್ನ ಪುಸ್ತಕ ಲೋಕ’ ವಿಶೇಷ ಉಪನ್ಯಾಸ.

 

ಗಾಯಕ ಮತ್ತು ರಂಗಭೂಮಿ ಕಲಾವಿದ ಜನ್ನಿ ಅವರಿಂದ ರಂಗಗೀತೆ. ಅತಿಥಿಗಳು: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ, ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ. ಮಧ್ಯಾಹ್ನ 12.30ಕ್ಕೆ ಜಿ.ಎಸ್. ಸಿದ್ದಲಿಂಗಯ್ಯ ಅವರಿಂದ ಪಂಪಭಾರತ ಪ್ರವೇಶ, 2 ಗಂಟೆಗೆ ಅಪ್ಪಗೆರೆ ತಿಪ್ಪರಾಜು ಅವರಿಂದ ತತ್ವಪದ. 2.15ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರಿಂದ ಪ್ರತಿ ತಿಂಗಳ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆ,2.30ಕ್ಕೆ ಕೇಶವರೆಡ್ಡಿ ಹಂದ್ರಾಳ ಅವರಿಂದ ‘ನನ್ನ ಕಥಾಲೋಕ’ ಉಪನ್ಯಾಸ. 3.30ಕ್ಕೆ ಕವಿಸ್ಪಂದನ. ಭಾಗವಹಿಸುವವರು: ಡಾ. ಸಿದ್ದಲಿಂಗಯ್ಯ, ಎಸ್. ಮಂಜುನಾಥ್, ಕೆ.ಬಿ. ಸಿದ್ದಯ್ಯ, ಎಚ್.ಎಲ್. ಪುಷ್ಪಾ, ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ.ಸಂಜೆ 5.35ಕ್ಕೆ ಡಾ. ಬಾನಂದೂರು ಕೆಂಪಯ್ಯ ಅವರಿಂದ ತತ್ವಪದ, ಸಂಜೆ 5.45ಕ್ಕೆ ಕಥೆಗಾರ ಎಸ್. ದಿವಾಕರ್ ಅವರಿಂದ ‘ಸಾಹಿತಿಯ ದೃಷ್ಟಿಯಲ್ಲಿ ಪಂಡಿತ್ ಭೀಮಸೇನ ಜೋಶಿ’ ಉಪನ್ಯಾಸ, ಅತಿಥಿಗಳು: ಡಾ.ಕೆ. ಮರುಳಸಿದ್ಧಪ್ಪ, ವೀಣಾ ವಾದಕ ವಿದ್ವಾನ್ ಡಿ. ಬಾಲಕೃಷ್ಣ.6.15ಕ್ಕೆ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರಿಂದ ಹಿಂದುಸ್ತಾನಿ ಗಾಯನ. ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ), ಗುರುಮೂರ್ತಿ ವೈದ್ಯ (ತಬಲಾ) ಸಾಥ್. ಸ್ಥಳ: ಕಾವಿಮನೆ, ಮಾನಸ ವಿದ್ಯಾಕೇಂದ್ರ, ಹೋಟೆಲ್ ಇಂಚರ ಹಿಂಭಾಗ, ಅಣ್ಣಯ್ಯ ರೆಡ್ಡಿ ಬಡಾವಣೆ, ಜೆ.ಪಿ. ನಗರ 6ನೇ ಹಂತ. ದೂ: 2245 1762

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.