ಶೂನ್ಯಬಡ್ಡಿ ಸಾಲ ನಿಷೇಧ

7
ಗ್ರಾಹಕರ ಹಿತರಕ್ಷಣೆ ಉದ್ದೇಶ: ಆರ್‌ಬಿಐ

ಶೂನ್ಯಬಡ್ಡಿ ಸಾಲ ನಿಷೇಧ

Published:
Updated:

ಮುಂಬೈ(ಪಿಟಿಐ):   ಕ್ರೆಡಿಟ್‌ ಕಾರ್ಡ್ ಬಳಸಿ ಸರಕುಗಳನ್ನು ಖರೀದಿಸಿ, ನಂತರ ಯಾವುದೇ ಬಡ್ಡಿ ದರ ಇಲ್ಲದೆ (ಶೂನ್ಯ ಬಡ್ಡಿ ದರ) ಸಮಾನ ಮಾಸಿಕ ಕಂತು­ಗಳ (ಇಎಂಐ) ಮೂಲಕ ಸಾಲ ಮರು­ಪಾವತಿ ಮಾಡು­ವಂತಹ ಜನಪ್ರಿಯ ಸಾಲ ಯೋಜನೆ­­ಗಳನ್ನು ನಿಲ್ಲಿಸು­ವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ವಾಣಿಜ್ಯ ಬ್ಯಾಂಕುಗಳಿಗೆ ಸೂಚನೆ ನೀಡಿದೆ.ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಸಲುವಾಗಿಯೇ  ಶೂನ್ಯ ಬಡ್ಡಿ ದರದ ಸಾಲ ಯೋಜನೆ ನಿಲ್ಲಿಸುವಂತೆ ಬ್ಯಾಂಕು­ಗಳಿಗೆ ಸೂಚನೆ ನೀಡಿರು­ವುದಾಗಿ ‘ಆರ್‌ಬಿಐ’ ಸ್ಪಷ್ಟಪಡಿಸಿದೆ.ಗ್ರಾಹಕರ ಸೆಳೆಯುವ ತಂತ್ರ: ಕ್ರೆಡಿಟ್‌ ಕಾರ್ಡ್ ಬಳಸಿ ಸರಕು ಗಳನ್ನು ಖರೀದಿಸಿ, ನಂತರ ಯಾವುದೇ ಬಡ್ಡಿ ದರ ಇಲ್ಲದೆ (ಶೂನ್ಯ ಬಡ್ಡಿ ದರ) ‘ಇಎಂಐ’ ಪಾವತಿಸಿ ಎನ್ನುವುದು ಗ್ರಾಹ ಕರನ್ನು ಸೆಳೆಯುವ ತಂತ್ರ ಮಾತ್ರ. ವಹಿವಾಟು ಪ್ರಕ್ರಿಯೆ ಶುಲ್ಕದ ರೂಪದಲ್ಲಿ ನಂತರ ಗ್ರಾಹಕ­ರಿಂದ ಬಡ್ಡಿ ವಸೂಲು ಮಾಡ­ಲಾಗುತ್ತದೆ. ಕೆಲವು ಬ್ಯಾಂಕು ಗಳು ಸಾಲ ನೀಡು­ವಾಗಲೇ ಮೂಲ ದಲ್ಲೇ ಬಡ್ಡಿ ಕಡಿತ ಮಾಡು­ತ್ತಿರುವುದು ಕೂಡ ‘ಆರ್‌ಬಿಐ’ ಗಮನಕ್ಕೆ ಬಂದಿದೆ. ಇಂತಹ ಯೋಜನೆಗಳಲ್ಲಿ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಯಾವುದೇ ಉದ್ದೇಶ ಇಲ್ಲ. ಆದ್ದರಿಂದ ಇದರ ಮೇಲೆ  ನಿಷೇಧ ಹೇರ­ಲಾಗುತ್ತಿದೆ ಎಂದು ‘ಆರ್‌­ಬಿಐ’ ಸ್ಪಷ್ಟಪಡಿಸಿದೆ.ಡೆಬಿಟ್‌ ಕಾರ್ಡ್‌ಗೆ ಶುಲ್ಕ ಇಲ್ಲ: ಇದೇ ವೇಳೆ, ಗ್ರಾಹಕರು ಸರಕುಗಳನ್ನು ಖರೀ ದಿಸಿ, ಡೆಬಿಟ್‌ ಕಾರ್ಡ್ ಬಳಸಿ ಪಾವತಿ­ಸಿದರೆ ಅದರ ಮೇಲೆ ಯಾ ವುದೇ ಹೆಚ್ಚುವರಿ ಶುಲ್ಕ ವಿಧಿಸ­ಬಾರದು ಎಂದೂ ‘ಆರ್‌ಬಿಐ’ ಸ್ಪಷ್ಟ ಸೂಚನೆ ನೀಡಿದೆ. ಈ ರೀತಿಯ ಯೋಜನೆಗಳಿರು­ವುದು ಗ್ರಾಹಕರನ್ನು ಆಕರ್ಷಿಸಲು ಮಾತ್ರ. ಈ ಮೂಲಕ ಹೆಚ್ಚು ಹೆಚ್ಚು ಸರಕುಗಳನ್ನು ಖರೀದಿ­ಸುವಂತೆ ಉತ್ತೇ­ಜಿ­ಸ­­ಲಾ­ಗುತ್ತದೆ.  ನಂತರ ಸರಕುಗಳು ಮತ್ತು ಮರು ಪಾವತಿ ಅವಧಿ ಆಧರಿಸಿ ಬಡ್ಡಿ ದರ ಮತ್ತು ವಹಿ­ವಾಟು ಪ್ರಕ್ರಿಯೆ ಶುಲ್ಕ ಹೇರ­ಲಾಗುತ್ತದೆ ಎಂದೂ ‘ಆರ್‌ಬಿಐ’ ಹೇಳಿದೆ.ಶೂನ್ಯ ಬಡ್ಡಿದರ ಕ್ರಮ ಅನುಸರಿ ಸುವ ಬದಲು ಬ್ಯಾಂಕುಗಳು, ಸರಕು­ಗಳಿಗೆ ಮಾರಾ­ಟಗಾರರು ನೀಡುವ ರಿಯಾ­ಯ್ತಿ ಆಧರಿಸಿ ಸಾಲ ನೀಡ­ಬೇಕು.   ಎಂದೂ ‘ಆರ್‌ಬಿಐ’ ಸಲಹೆ ಮಾಡಿದೆ. ಹಬ್ಬಗಳ ವೇಳೆ ಸಾಲ ಮಾಡಿಯಾದರೂ ಮನೆಗೆ ಹೊಸಪರಿ ಕರ­ಗಳನ್ನು  ಖರೀದಿ­ಸಬೇಕು ಎಂದು ಕೊಂಡಿದ್ದವರಿಗೆ ಆರ್‌ಬಿಐ ನಿರ್ಧಾರ­ದಿಂದ ನಿರಾಸೆ ಕಾದಿದೆ.ಶೂನ್ಯ ಬಡ್ಡಿದರ ಕ್ರಮ ಅನುಸರಿಸುವ ಬದಲು ಬ್ಯಾಂಕುಗಳು, ಸರಕು­ಗಳಿಗೆ ಮಾರಾ­ಟಗಾರರು ನೀಡುವ ರಿಯಾ­ಯ್ತಿ ಆಧರಿಸಿ ಸಾಲ ನೀಡ­ಬೇಕು ಎಂದೂ ‘ಆರ್‌ಬಿಐ’ ಸಲಹೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry