ಶೃಂಗೇರಿಯಲ್ಲಿ ಬಿಜೆಪಿ ಪ್ರತಿಭಟನೆ

7

ಶೃಂಗೇರಿಯಲ್ಲಿ ಬಿಜೆಪಿ ಪ್ರತಿಭಟನೆ

Published:
Updated:

ಶೃಂಗೇರಿ: ಬೇಗಾರು ಗ್ರಾಮ ಪಂಚಾ ಯತಿ ಸದಸ್ಯ ಸುರೇಶ್‌ ಜಟ ಗೇಶ್ವರ ಮೇಲೆ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ ಕೀಯ ಪ್ರೇರಿತವಾಗಿದ್ದು ಸರ್ಕಾರ ಕೂಡಲೇ ಪ್ರಕರಣ ಕೈಬಿಡಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಚ್.ಎಸ್‌. ನಟೇಶ್‌ ಒತ್ತಾಯಿಸಿದರು.ಪಟ್ಟಣದ ಸಂತೆ ಮಾರಕಟ್ಟೆ ಮುಂಭಾ ಗದಲ್ಲಿ ಗುರುವಾರ ಸುರೇಶ್‌ ಜಟ ಗೇಶ್ವರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ ಪಕ್ಷದವರು ಸೋಲಿನ ಹತಾಶೆಯಿಂದ ಬಿಜೆಪಿಯ ಶಾಸಕರು ಸೇರಿದಂತೆ ಪಕ್ಷದ ಕಾರ್ಯಕರ್ತರ ಮೇಲೆ ಮಾನ ಹಾನಿಕರ ಮೊಕದ್ದಮೆ ದಾಖಲಿಸುವ ಮೂಲಕ ತೇಜೋವಧಗೆ ಯತ್ನಿಸುತ್ತಿದ್ದಾರೆ.

ಇದೀಗ ಸುರೇಶ್‌ ಜಟಗೇಶ್ವರ ಪ್ರಕರಣದಲ್ಲೂ ಸಹ ಸಂಚು ರೂಪಿಸಿ ಅ. 5ರಂದು ಅತ್ಯಾಚಾರ ನಡೆದಿದೆ ಎಂದು ಬಾಲಕಿಯಿಂದ ದೂರು ಕೊಡಿಸಿದ್ದು, ಇದರಲ್ಲಿ ಕಾಂಗ್ರೆಸ್‌ನ ಭಾಸ್ಕರ ನಾಯ್ಕ ಅವರ ಕೈವಾಡವಿದೆ ಎಂದು ಆರೋಪಿ ಸಿದರು. ಇದೇ ಸಂದರ್ಭದಲ್ಲಿ ಈ ಸುಳ್ಳು ಪ್ರಕರಣವನ್ನು ಸರ್ಕಾರ ಕೈಬಿಟ್ಟು, ಪೊಲೀಸರಿಗೆ ಬಿ ರಿಪೋರ್ಟ್‌ ಸಲ್ಲಿಸುವಂತೆ ಆದೇಶಿಸಬೇಕೆಂದು ಒತ್ತಾಯಿಸಿ ಸ್ಥಳಕ್ಕೆ ಆಗಮಿಸಿದ ಪ್ರಭಾರಿ ತಹಶೀಲ್ದಾರ್‌ ಶೇರಿಗಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ಎ.ಎಸ್‌. ನಯನ, ಜಿಲ್ಲಾಪಂಚಾಯತಿ ಸದಸ್ಯ ಎಂ.ಎಸ್‌. ರಂಗನಾಥ್‌, ನೂತನ್‌ ಕುಮಾರ್‌, ಅರುಣ್‌ ಕುಮಾರ್‌, ನಾಗೇಶ್‌ ಕಾಮತ್‌, ಶಿವಶಂಕರ್‌, ಅಮಿತಾ ಸತ್ಯನಾರಾಯಣ್‌, ಗಿರಿಜಾ ಲಕ್ಷ್ಮೀ ಮತ್ತಿತರರು ಇದ್ದರು. ಪ್ರತಿಭಟನಾ ಸಭೆಗೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರು ಸುರೇಶ್‌ ಜಟ ಗೇಶ್ವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry