ಶೃಂಗೇರಿ: ಲಾಠಿ ಪ್ರಹಾರ ಖಂಡಿಸಿ ಪ್ರತಿಭಟನೆ

7

ಶೃಂಗೇರಿ: ಲಾಠಿ ಪ್ರಹಾರ ಖಂಡಿಸಿ ಪ್ರತಿಭಟನೆ

Published:
Updated:

ಶೃಂಗೇರಿ: ಪಟ್ಟಣದ ಹೊರವಲಯದ ಸಂಕ್ಲಾಪುರದಲ್ಲಿ ಬುಧವಾರ ರಾತ್ರಿ ಗಣಪತಿ ವಿಸರ್ಜನೆಗೆ ಮೆರವಣಿಗೆ­ಯಲ್ಲಿ ಸಾಗುತ್ತಿದ್ದವರ ಮೇಲೆ ವಿನಾ­ಕಾರಣ ಪೊಲೀಸರು ಲಾಠಿ ಪ್ರಹಾರ ಮಾಡಿರುವುದನ್ನು ಖಂಡಿಸಿ ಇಲ್ಲಿನ ನಾಗರಕರು ಗುರುವಾರ ಗಣಪತಿ ಪೆಂಡಾಲ್‌ನ ಮುಂಭಾಗದಲ್ಲಿ ಪ್ರತಿಭಟನೆ ನೆಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರಣ್ಯಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ್‌, ’ನಿಗದಿತ ವೇಳೆಯಲ್ಲೇ ನಾವು ಶಾಂತಿ­ಯುತ­ವಾಗಿ ಗಣಪತಿ ವಿಸರ್ಜನೆಗೆ ಸಾಗುತ್ತಿ­ದ್ದರೂ ಪೊಲೀಸರು ಕ್ಷುಲ್ಲಕ ಕಾರಣ­ಕ್ಕಾಗಿ ಮಾತಿನ ಚಕಮಕಿ ನಡೆಸಿ ಲಾಠಿ ಪ್ರಹಾರ ನಡೆಸಿರವುದು ಖಂಡನೀಯ. ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿ­ದಂತೆ, ಮಹಿಳೆಯರು ಮತ್ತು ಮಕ್ಕಳ ಮೇಲೆ ಲಾಠಿ ಬೀಸಿರುವ ಪೊಲೀಸರ ವಿರುದ್ಧ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌.ಎಸ್‌. ಹಿರೇಮಠ್‌ ಗ್ರಾಮಸ್ಥರ ಮನ­ವೊಲಿಕೆಗೆ ಯತ್ನಿಸಿದರಾದರೂ, ಗ್ರಾಮಸ್ಥ­ರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರದೀಪ್‌ ಅವರನ್ನು ಸ್ಥಳಕ್ಕೆ ಕರೆಸ­ಬೇಕೆಂದು ಪಟ್ಟು ಹಿಡಿದರು. ನಂತರ ಪ್ರದೀಪ್‌ ಪ್ರತಿಭಟನಾ ನಿರತರೊಂದಿಗೆ ಕ್ಷಮಾಪಣೆ ಕೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೊಸ್ಕರೆ ನಟೇಶ್‌, ಮಾಜಿ ಅಧ್ಯಕ್ಷ ಎ.ಎಸ್‌. ನಯನ, ಬಜರಂಗದಳ ಜಿಲ್ಲಾ ಸಂಚಾಲಕ ಆನೆಗುಂದ ಉದಯ್‌, ಹರೀಶ್‌ ವಿ. ಶೆಟ್ಟಿ ಹಾಗೂ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry