ಶೃಂಗೇರಿ: ಜಿಂಕ್ ಸಲ್ಫೇಟ್ ಬಳಸಲು ಸೂಚನೆ

7

ಶೃಂಗೇರಿ: ಜಿಂಕ್ ಸಲ್ಫೇಟ್ ಬಳಸಲು ಸೂಚನೆ

Published:
Updated:

ಶೃಂಗೇರಿ:  ಶೃಂಗೇರಿ ಜಿಲ್ಲೆಯಲ್ಲೇ ಅಧಿಕ ಮಳೆ ಬೀಳುವ (3000 ಮಿ.ಮೀ-4000 ಮಿ.ಮೀ) ತಾಲ್ಲೂಕು ಎಂದು ಅಂಕಿ ಅಂಶಗಳಿಂದ ಧೃಡಪಟ್ಟಿದ್ದು, ಈ ರೀತಿಯ ಅಧಿಕ ಮಳೆಯ ಪರಿಣಾಮ ಮಣ್ಣಿನಲ್ಲಿರುವ ಪ್ರಮುಖ ಮೂಲವಸ್ತುಗಳಾದ ಕ್ಯಾಲ್ಸಿಯಂ, ಮೆಗ್ನೀಷಿಯಂ, ಅಲ್ಯೂಮಿನಿಯಂ ಮತ್ತು ಕಬ್ಬಿಣದಂತಹ ವಸ್ತುಗಳು ನೀರಿನಲ್ಲಿ ಕರಗಿ ನೀರಿನ ಮುಖಾಂತರ ಭೂಮಿಯಿಂದ ಕಳೆದು ಹೋಗುವುದರಿಂದ ಭೂಮಿಯ ರಸ ಸಾರ ಸಾಮಾನ್ಯಕ್ಕಿಂತ ತೀರಾ ಕಡಿಮೆಯಾಗಿ ಇಳುವರಿಯ ಮೇಲೆ ನೇರ ಪರಿಣಾಮ ಬೀಳುವುದಲ್ಲದೇ ಭೂಮಿಯ ಗುಣಮಟ್ಟ ಹಾಳುಗೆಡವುತ್ತದೆ.ಆದ್ದರಿಂದ ಇಂತಹ ಪ್ರದೇಶಗಳಲ್ಲಿ ಇಲಾಖೆಯಲ್ಲಿ ಸಬ್ಸಿಡಿಯಲ್ಲಿ ದೊರೆಯುವ ಸುಣ್ಣವನ್ನು ಬಳಕೆ ಮಾಡುವುದರಿಂದ ಭೂಮಿಯ ಗುಣಧರ್ಮಗಳನ್ನು ಕಾಪಾಡುವುದರ ಜತೆಯಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಸಲಹೆ ಕೊಟ್ಟಿದ್ದಾರೆ.ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಲಘು ಪೋಷಕಾಂಶಗಳ ಕೊರತೆ ನಮ್ಮ ತಾಲ್ಲೂಕಿನಾದ್ಯಂತ ಎಲ್ಲಾ ಭೂಮಿಯಲ್ಲಿ ಕಂಡುಬಂದಿದೆ ಎಂದು ವಿಶ್ಲೇಷಣೆಯಿಂದ ತಿಳಿದಿರುವುದರಿಂದ ಕೃಷಿ ಇಲಾಖೆಯಲ್ಲಿ ಸಬ್ಸಿಡಿಯಲ್ಲಿ ದೊರೆಯುವ ಜಿಂಕ್ ಸಲ್ಫೇಟ್ ಅನ್ನು ಸದ್ಬಳಕೆ ಮಾಡಬೇಕೆಂದು ರೈತರಿಗೆ ಸಲಹೆ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry